ತೆರೆಮರೆಗೆ ಸರಿದ ಮೈಸೂರಿನ ಕೌಟುಂಬಿಕ ಚಿತ್ರಮಂದಿರ ಲಕ್ಷ್ಮಿ!
1 min readಕೊರೊನಾ ಎಫೆಕ್ಟ್‌ನಿಂದಾಗಿ ಮೈಸೂರಿನ ಹೆಸರಾಂತ ಲಕ್ಷ್ಮಿ ಚಿತ್ರಮಂದಿರ ಶಾಶ್ವತವಾಗಿ ಬಾಗಿಲು ಮುಚ್ಚುತ್ತಿದೆ. ಮೈಸೂರು ಚಲನಚಿತ್ರ ಪ್ರದರ್ಶಕರ ಕಾರ್ಯದರ್ಶಿ ರಾಜಾರಾಂ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, 80-90ರ ದಶಕದಲ್ಲಿ ಹಲವಾರು ಸಿನಿಮಾಗಳು ವರ್ಷ ಪೂರೈಸಿದ್ದ ಹೆಗ್ಗಳಿಕೆಗೆ ಈ ಲಕ್ಷ್ಮಿ ಚಿತ್ರಮಂದಿರ ಪಾತ್ರವಾಗಿದೆ. ಕೊರೋನಾದಿಂದ ಕಳೆದ ಒಂದೂವರೆ ವರ್ಷದಿಂದಲೂ ನಷ್ಟದಲ್ಲಿದ್ದ ಲಕ್ಷ್ಮಿ ಥಿಯೇಟರ್. ಭಾರೀ ಆರ್ಥಿಕ ನಷ್ಟದ ಕಾರಣದಿಂದ ಶಾಶ್ವತವಾಗಿ ಲಕ್ಷ್ಮಿ ಥಿಯೇಟರನ್ನು ಮುಚ್ಚಲು ನಿರ್ಧಾರ ಮಾಡಿದ್ದಾರೆ.
ಕೋರೋನಾ ಕಾರಣದಿಂದಾಗಿ ಲಕ್ಷ್ಮಿ ಥಿಯೇಟರನ್ನು ಶಾಶ್ವತವಾಗಿ ಮುಚ್ಚುತ್ತಿದ್ದೇವೆ. ಆರ್ಥಿಕ ನಷ್ಟದಲ್ಲಿರುವುದರಿಂದ ತೆರಿಗೆ ಕಟ್ಟುವುದಕ್ಕೂ ನಮಗೆ ತೊಂದರೆಯಾಗಿದೆ. ಹೀಗಾಗಿ ಶಾಶ್ವತವಾಗಿ ಥಿಯೇಟರ್ ಮುಚ್ಚುವುದಕ್ಕೆ ನಾವು ತೀರ್ಮಾನ ಮಾಡಿದ್ದೇವೆ. ಈಗಾಗಲೇ ಆನ್ ಲೈನ್ ಓಟಿಟಿ ಅಂತಾ ಎಲ್ಲಾ ಸಿನಿಮಾಗಳು ಅಲ್ಲೇ ಪ್ರದರ್ಶನಗೊಳ್ಳುತ್ತಿವೆ. ಪರಿಣಾಮ ಸಿನಿಮಾ ಥಿಯೇಟರ್ ಗಳಿಗೆ ಬೆಲೆ ಇಲ್ಲದಂತಾಗಿದೆ. ಕೋವೀಡ್ ಬಂದು ಎಲ್ಲವನ್ನೂ ಮುಳುಗಿಸಿದೆ. ಸುದೀರ್ಘ 70 ವರ್ಷಗಳ ಕಾಲ ಲಕ್ಷ್ಮಿ ಥಿಯೇಟರ್ ಸೇವೆ ನೀಡಿದೆ. ಇಲ್ಲಿ 600 ಕ್ಕೂ ಹೆಚ್ಚು ಕನ್ನಡ ಚಿತ್ರಗಳು ಪ್ರದರ್ಶನಗೊಂಡಿವೆ.
ಪರಭಾಷಾ ಚಿತ್ರಗಳು ಕೂಡ ಇಲ್ಲಿ ಯಶಸ್ವಿ ಪ್ರದರ್ಶನ ಕಂಡಿವೆ. ಲಕ್ಷ್ಮಿ ಥಿಯೇಟರನ್ನು ಮುಚ್ಚುತ್ತಿರುವುದಕ್ಕೆ ನಮಗೂ ಬೇಸರವಾಗುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ಕೊರೊನಾ ಮೂರನೇ ಅಲೆಯೂ ಬಂದರೆ ಚಿತ್ರಮಂದಿರದ ನಿರ್ವಹಣೆ ಕಷ್ಟವಾಗಲಿದೆ. ಹೀಗಾಗಿ ಚಲನಚಿತ್ರ ಮಂದಿರವನ್ನು ಶಾಶ್ವತವಾಗಿ ಮುಚ್ಚಲು ನಿರ್ಧಾರ ಮಾಡಿದ್ದೇವೆ ಅಂತ ಲಕ್ಷ್ಮಿ ಥಿಯೇಟರ್ ಮಾಲೀಕ ಸುಬ್ರಹ್ಮಣ್ಯ ಮಾಹಿತಿ ನೀಡಿದ್ದಾರೆ.