ಮೈಸೂರಿನಲ್ಲಿ ಕರಕುಶಲ ಕಾರ್ಮಿಕರ ಅಳಲು: ನಮಗು ಪರಿಹಾರ ಘೋಷಣೆ ಮಾಡಲಿ ಎಂದು ಮನವಿ
1 min readಮೈಸೂರು: ನಮಗು ಸಿಎಂ ಯಡಿಯೂರಪ್ಪ ಅವರು ಪರಿಹಾರ ಘೋಷಣೆ ಮಾಡಲಿ ಎಂದು ಮೈಸೂರಿನ ಕರಕುಶಲ ಕಾರ್ಮಿಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಎಲ್ಲ ವರ್ಗದಂತೆ ನಮಗು ಆದ್ಯತೆ ಕೊಡಿ. ನಮಗೆ ಯಾವುದೇ ಸೂಕ್ತ ಸೌಲಭ್ಯ ಇಲ್ಲ. ಲಾಕ್ ಡೌನ್‌ನಿಂದ ನಮ್ಮ ಜೀವನ ನಿರ್ವಹಣೆಗೆ ಸಮಸ್ಯೆ ಆಗಿದೆ. ನಮಗು ಸಿಎಂ ಯಡಿಯೂರಪ್ಪ ಅವರು ಪರಿಹಾರ ಘೋಷಣೆ ಮಾಡಲಿ ಅಂತ ಕುಂದಣ ಕಲೆ(ಇನ್ಲೇ ವರ್ಕ್) ಕಾರ್ಮಿಕರು ಕೇಳಿಕೊಂಡಿದ್ದಾರೆ.
ನಮ್ಮದ್ದು ಬರೋಬ್ಬರಿ 500ಕ್ಕು ಹೆಚ್ಚು ಕುಟುಂಬ ಇದೆ. ಇದರಲ್ಲಿ 3 ಸಾವಿರ ಜನರು ಇದ್ದಾರೆ. ನಮ್ಮ ಸಮಸ್ಯೆಯನ್ನ ಸಿಎಂ ಅವರೇ ಪರಿಹರಿಸಬೇಕು. ಕರಕುಶಲ ಕಲೆಯನ್ನೇ ನೆಚ್ಚಿ ನಾವು ಬದುಕಿದ್ದೇವೆ. ಇದೀಗಾ ಲಾಕ್‌ಡೌನ್ ನಿಂದ ವ್ಯಾಪಾರ ಎಲ್ಲವು ಸಮಸ್ಯೆ ಆಗಿದೆ. ಒಂದೊತ್ತಿನ ಆಹಾರಕ್ಕು ಸಮಸ್ಯೆ ಆಗಿದೆ. ಸಿಎಂ ಅವರು ಮುಂದಿನ ಪರಿಹಾರ ಘೋಷಣೆಯಲ್ಲಿ ನಮ್ಮನ್ನು ಪರಿಗಣಿಸಿ ಎಂದು ಮನವಿ ಮಾಡಿದ್ದಾರೆ.