ಲಾಕ್‌ಡೌನ್ ಇದ್ರೂ ಕದ್ದುಮುಚ್ಚಿ ಬಟ್ಟೆ ವ್ಯಾಪಾರ
1 min readಮೈಸೂರು: ಅಂಗಡಿ ಮಾಲೀಕನೋರ್ವ ಲಾಕ್‌ಡೌನ್ ಇದ್ರೂ ಕದ್ದುಮುಚ್ಚಿ ಬಟ್ಟೆ ವ್ಯಾಪಾರ ಮಾಡುತ್ತಿದ್ದಾರೆ. ಮೈಸೂರಿನ ನಜರ್‌ಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಗರದ ಯುವರಾಜ್ ಸಿಲ್ಕ್ ಹೌಸ್ ಮಾಲೀಕನ ದರ್ಬಾರ್ ಇದು. ಅಂಗಡಿ ಮುಂದೆ ಕಾಲ ಮೇಲೆ ಕಾಲು ಹಾಕಿಕೊಂಡು ವ್ಯಾಪಾರ ಮಾಡುತ್ತಿದ್ದಾನೆ. ಗಿರಾಕಿಗಳನ್ನು ಒಳಗೆ ಬಿಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾನೆ ಈ ಆಸಾಮಿ.
ಅಂಗಡಿ ಗೇಟ್ ಬೀಗ ಹಾಕಿ ಒಳಗಡೆ ವ್ಯಾಪಾರ ಮಾಡುತ್ತಿದ್ದಾರೆ. ಮೊದಲಿಗೆ ವೀಡಿಯೋ ಕಾಲ್ ಮಾಡಿ ಬಟ್ಟೆ ನೋಡಿಕೊಳ್ಳಬೇಕು. ನಂತರ ಒಳಗೆ ಬಂದು ಬಟ್ಟೆ ಪಡೆಯಬೇಕು. ಬಟ್ಟೆಯ ಬಿಲ್ ಮಾತ್ರ ಗೂಗಲ್ ಪೇನಲ್ಲಿ ಸಂದಾಯ ಮಾಡಬೇಕು.