ನಕಲಿ ದಾಖಲೆ ಸೃಷ್ಠಿಸಿ ವಂಚನೆಗೆ ಯತ್ನ ಪ್ರಕರಣ: ದರ್ಶನ್ ಅವರ ಮೊದಲ ಪ್ರತಿಕ್ರಿಯೆ
1 min read
ಮೈಸೂರು: ನಕಲಿ ದಾಖಲೆ ಸೃಷ್ಠಿಸಿ ನಟ ದರ್ಶನ್ ಅವರಿಗೆ 25 ಕೋಟಿ ವಂಚನೆಗೆ ಯತ್ನ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇದರ ಹಿಂದೆ ಇರುವವರು ಯಾರೇ ಆದರೂ ನಾನು ಸುಮ್ಮನೆ ಬಿಡಲ್ಲ. ಇದಕ್ಕೆ ರೆಕ್ಕೆ ಪುಕ್ಕ ಕಟ್ ಮಾಡೋದಲ್ಲ ನಾನು ಅದರ ತಲೆಯನ್ನೆ ಕಟ್ ಮಾಡ್ತೀನಿ ಅಂತ ಹೇಳಿದ್ದಾರೆ.
ಮೈಸೂರಿನಲ್ಲಿ ಪೊಲೀಸರ ವಿಚಾರಣೆ ಮುಗಿಸಿ ಹೊರಬಂದ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ನನ್ನ ಡಾಕ್ಯುಮೆಂಟ್ ಪೋರ್ಜರಿ ಆಗಿದೆ ಅಂತಾ ಗೊತ್ತಾಗಿತ್ತು. ಒಂದು ತಿಂಗಳ ಹಿಂದೆ ನನ್ನ ಗಮನಕ್ಕೆ ಬಂತು. ಬ್ಯಾಂಕ್ ಮ್ಯಾನೇಜರ್ ಅನ್ನ ಯಾರು ಪರಿಚಯ ಮಾಡಿದ್ರು, ಹೇಗೆ ಪರಿಚಯ ಮಾಡಿದ್ರು ಅಂತಾ ಎಲ್ಲವೂ ಗೊತ್ತಾಗಲಿದೆ. ಆಯಮ್ಮ ಬಾಯಿ ಬಿಟ್ಟರೆ ಎಲ್ಲ ಗೊತ್ತಾಗುತ್ತದೆ. ಪೊಲೀಸರು ತನಿಖೆಯಲ್ಲಿ ಬಾಯಿ ಬಿಡಿಸ್ತಾರೆ.

ಒಳಗಡೆ ಮಾಹಿತಿ ಏನು ಬರುತ್ತೆ ಅನ್ನೋದು ಗೊತ್ತಿಲ್ಲ. ಇವತ್ತು ಪೊಲೀಸ್ ಬನ್ನಿ ಅಂತಾ ಕರೆದಿದ್ದರು ಬಂದಿದ್ದೇನೆ. ನಾನು ಕಥೆ ಹೇಳಿದ್ರೆ ಚೆನ್ನಾಗಿರಲ್ಲ. ಅವ್ರು ಏನು ಹೇಳಿದ್ರು ಎಲ್ಲವು ಹೊರ ಬಂದ ಮೇಲೆ ಗೊತ್ತಾಗುತ್ತದೆ. ಸ್ನೇಹಿತರಿಂದಲೇ ಮೋಸ ಆಗಿದೆ ಅಂತಾ ಗೊತ್ತಾದರೇ ಯಾರದರೂ ನಾನು ಬಿಡಲ್ಲ. ಇದಕ್ಕೆ ರೆಕ್ಕೆ ಪುಕ್ಕ ಕಟ್ ಮಾಡೋದಲ್ಲ. ನಾನು ಅದರ ತಲೆಯನ್ನೆ ಕಟ್ ಮಾಡ್ತೀನಿ ಅಂತ ಹೇಳಿದರು.