ನಟ ದರ್ಶನ್’ರಿಗೆ ವಂಚನೆಗೆ ಯತ್ನ ಪ್ರಕರಣ: ಬ್ಯಾಂಕ್‌ನಲ್ಲಿ ಲೋನ್ ಕೊಡಿಸುವ ನೆಪದಲ್ಲಿ ವಂಚನೆಗೆ ಪ್ರಯ್ನತ ಮಾಡಲಾಗಿದೆ;- ಮೈಸೂರು ಡಿಸಿಪಿ
1 min read
ಮೈಸೂರು: ಬ್ಯಾಂಕ್‌ನಲ್ಲಿ ಲೋನ್ ಕೊಡಿಸುವ ನೆಪದಲ್ಲಿ ವಂಚನೆಗೆ ಪ್ರಯ್ನತ ಮಾಡಲಾಗಿದೆ. ಆದ್ರೆ ಯಾರಿಗು ವಂಚನೆ ಆಗಿಲ್ಲ ಅಂತ ಮೈಸೂರು ಡಿಸಿಪಿ ಪ್ರದೀಪ್ ಗುಂಟಿ ಹೇಳಿದ್ದಾರೆ.
ಮೈಸೂರಿನ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆಸ್ತಿ ದಾಖಲೆಗಳನ್ನು ಫೋರ್ಜರಿ ಮಾಡಿ ಬ್ಯಾಂಕ್ ಲೋನ್ ಮಾಡಲು ಪ್ರಯತ್ನ ಮಾಡಲಾಗಿದೆ. ಈ ಸಂಬಂಧ ಹೆಬ್ಬಾಳ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರುದಾರ ಹರ್ಷ ಅವರನ್ನ ಮಾತ್ರ ನಾವು ವಿಚಾರಣೆಗೆ ಕರೆದಿದ್ದೆವು. ಬೇರೆ ಯಾರನ್ನು ನಾವು ವಿಚಾರಣೆಗೆ ಕರೆದಿಲ್ಲ. ಆದ್ರೆ ಹರ್ಷ ಅವರೊಂದಿಗೆ ಕೆಲ ಸ್ನೇಹಿತರು ಬಂದಿದ್ದರು. ಸದ್ಯಕ್ಕೆ ವಿಚಾರಣೆ ನಡೆಯುತ್ತಿದೆ.

ಪ್ರಕರಣ ಸಂಬಂಧ ಯಾರನ್ನೂ ವಶಕ್ಕೆ ಪಡೆದಿಲ್ಲ. ಈಗ ವಿಚಾರಣೆ ನಡೆಸುತ್ತಿದ್ದೇವೆ. ಪ್ರಕರಣ ತನಿಖಾ ಹಂತದಲ್ಲಿ ಇರುವುದರಿಂದ ಹೆಚ್ಚಿನ ವಿವರ ನೀಡಲು ಸಾಧ್ಯವಿಲ್ಲ ಅಂತ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಪ್ರದೀಪ್ ಗುಂಟಿ ಹೇಳಿದ್ದಾರೆ.