ನಟ ದರ್ಶನ್ ಬಳಿ ತೆರಳಿದ್ದ ನಕಲಿ ಮಹಿಳಾ ಬ್ಯಾಂಕ್ ಮ್ಯಾನೇಜರ್ ಪೊಲೀಸರ ವಶಕ್ಕೆ
1 min readನಟ ದರ್ಶನ್ ಬಳಿ ತೆರಳಿದ್ದ ನಕಲಿ ಮಹಿಳಾ ಬ್ಯಾಂಕ್ ಮ್ಯಾನೇಜರ್ ಒಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲೋನ್ ವಿಚಾರವಾಗಿ ಮಾತನಾಡಲು ತೆರಳಿದ್ದ ಮಹಿಳೆ
ನಾನು ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡಿದ್ದರು. ನಿಮ್ಮ ಸ್ನೇಹಿತರು ನಿಮ್ಮ ಶ್ಯೂರಿಟಿಯಲ್ಲಿ ಸಾಲಕ್ಕೆ ಅರ್ಜಿ ಹಾಕಿದ್ದಾರೆ. ಇದರ ಬಗ್ಗೆ ಮಾಹಿತಿ ಪಡೆಯಲು ಬಂದಿದ್ದೇನೆ ಎಂದು ಮಹಿಳೆ ಬಳಿ ಹೇಳಿದ್ದಾರೆ.
ನಿರ್ಮಾಪಕ ಉಮಾಪತಿ ಹಾಗೂ ಶ್ರೀನಿವಾಸ ಗೌಡ ಜೊತೆ ಈ ಮಹಿಳೆ ಬಂದಿದ್ದರು. ಮೈಸೂರಿನ ಕೆಲ ದರ್ಶನ್ ಸ್ನೇಹಿತರು 25 ಕೋಟಿ ಲೋನ್‌ಗೆ ಅರ್ಜಿ ಹಾಕಿದ್ದಾರೆ, ನಿಮ್ಮ ಹೆಸರು ಬಳಸಿಕೊಂಡು ಲೋನ್ ಪಡೆದಿದ್ದಾರೆ ಎಂದಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿದಾಗ ಲೋನ್‌ಗೆ ಯಾರು ಅರ್ಜಿ ಹಾಕಿರಲಿಲ್ಲ.
ಈಗಾಗಿ ದರ್ಶನ್ ಸ್ನೇಹಿತರಿಂದ ಹೆಬ್ಬಾಳಾ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಇನ್ನು ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸದ್ಯ ಎನ್ ಆರ್ ಎಸಿಪಿ ಕಚೇರಿಗೆ ನಟ ದರ್ಶನ್ ಆಗನಿಸಿದ್ದಾರೆ. ಈಗಾಗಲೇ ಉಮಾಪತಿ ಹಾಗೂ ಶ್ರೀನಿವಾಸ್ ಗೌಡರನ್ನು ಪೊಲೀಸರು ಕರೆಸಿದ್ದಾರೆ. ನಕಲಿ ಮ್ಯಾನೇಜರ್ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.
ವಿಚಾರಣೆ ವೇಳೆ ಉಮಾಪತಿ ಹೇಳಿದ ಕಾರಣ ದರ್ಶನ ಬಳಿ ಬಂದು ಈ ರೀತಿ ಮಾಡಿದೆ ಎಂದು ಮಹಿಳೆ ಹೇಳಿದ್ದಾಳೆ. ಈ ರೀತಿ ಉಮಾಪತಿ ಯಾವ ಕಾರಣಕ್ಕೆ ಮಾಡಿದರು.
ಈ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಖುದ್ದು ಡಿಸಿಪಿ ಪ್ರದೀಪ್ ಗುಂಠಿಯಿಂದ ತನಿಖೆ ನೇಯುತ್ತಿದೆ. ಎಸಿಪಿ ಶಿವಶಂಕರ್ ಸಹ ಉಪಸ್ಥಿತರಿದ್ದಾರೆ.