ಮೈಸೂರು : ಕಾಮುಕರನ್ನ ಅರೆಸ್ಟ್ ಮಾಡಿದ ಟೀಂ ಇದೆ ನೋಡಿ!
1 min readಮೈಸೂರು ಗ್ಯಾಂಗ್ ರೇಪ್ ಪ್ರಕರಣ ಇಡೀ ದೇಶವೇ ಒಂದು ಕ್ಷಣ ಮೈಸೂರಿನತ್ತ ತಿರುಗಿ ನೋಡುವಂತೆ ಮಾಡಿತ್ತು. ಸಾಂಸ್ಕೃತಿಕ ನಗರಿಯಲ್ಲಿ ಇಂತಹ ಘಟನೆ ನಡೆದಿದ್ಯಾ ಅಂತ ಕೇಳುವವರೇ ಹೆಚ್ಚು. ಆದ್ರೆ ಕಾಡ್ಗಿಚ್ಚಿನಂತೆ ಹಬ್ಬಿದ ಈ ಸುದ್ದಿ ಬಳಿಕ ಇದು ನಿಜವಾಗಿಯು ಪತ್ತೆ ಆಗೋಲ್ಲ ಎಂದವರೇ ಹೆಚ್ಚು. ಆದರೆ ಈ ಗ್ಯಾಂಗ್ ರೇಪ್ ಪ್ರಕರಣವನ್ನು ಚೇಸ್ ಮಾಡಿ ಪತ್ತೆ ಹಚ್ಚಿದ ಮೈಸೂರು ಪೊಲೀಸರಿಗೆ ಈಗ ಎಲ್ಲೆಡೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಹೌದು ಖುದ್ದು ಗೃಹ ಸಚಿವರೇ ಇದೀಗಾ ಮೈಸೂರು ಪೊಲೀಸರ ತಂಡಕ್ಕೆ 5 ಲಕ್ಷದ ಬಹುಮಾನ ಘೋಷಣೆ ಮಾಡಿದ್ದಾರೆ. ಇತ್ತ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಪ್ರವೀಣ್ ಸೂದ್ ಕೂಡ ಅಭಿನಂದನೆ ಸಲ್ಲಿಸಿದ್ದಾರೆ.
ಇನ್ನು ಘಟನೆ ಬಳಿಕ ಒಂದೇ ಒಂದು ಸುಳಿವು ಸಿಗದೆ ಇರುವಾಗ ಅಲ್ಲೊಂದು ಬಸ್ ಟಿಕೆಟ್ ಮಾಹಿತಿ ನೀಡಿತ್ತು. ಅದರ ಬೆನ್ನತ್ತಿದ ಮೈಸೂರು ಪೊಲೀಸರಿಗೆ ಆರೋಪಿಗಳು ಇರುವ ಜಾಗ ಗೊತ್ತಾಗಿತ್ತು.
ಸರಿಯಾದ ಊಟ, ನಿದ್ದೆ ಇಲ್ಲದೆ ಆರೋಪಿಗಳ ಸೆರೆ ಹಿಡಿಯುವ ಹಸಿವಿನಿಂದ ಸಾಗಿದ ಪೊಲೀಸರಿಗೆ ಆರೋಪಿಗಳ ಪತ್ತೆ ಹಚ್ಚುವಿಕೆ ಸುಲಭವಾಗಿರಲಿಲ್ಲ. ಬರೋಬ್ಬರಿ 100 ಮಂದಿ ಪೊಲೀಸರು ಈ ಕಾರ್ಯಚರಣೆಯಲ್ಲಿದ್ದರು, ಮೈಸೂರಿನ ಸ್ಪೆಷಲ್ ಟೀಂ ಈ ಆಪರೇಷನ್ ಸಕ್ಸಸ್ ಮಾಡಿದ್ದಾರೆ.
ಇನ್ನು ಈ ಗ್ಯಾಂಗ್ ರೇಪ್ ನಡೆಸಿದ ಕಾಮುಕರ ಪತ್ತೆ ತಂಡದ ನೇತೃತ್ವ ವಹಿಸಿದ್ದ ಪೊಲೀಸರು ಇವರೇ ಆಗಿದ್ದು ಎಲ್ಲರು ಈ ತಂಡಕ್ಕೆ ಶುಭಾಶಯ ಕೋರುತ್ತಿದ್ದಾರೆ.
ಇನ್ನು ಈ ಕಾರ್ಯಚರಣೆಗೆ ದಕ್ಷಿಣ ವಲಯ ವ್ಯಾಪ್ತಿಯ ಎಲ್ಲ ಪೋಲೀಸರು ಭಾಗಿಯಾಗಿದ್ದು ವಿಶೇಷ, ಫೋನ್ ಟ್ರೆಸ್, ನೆಟ್ವರ್ಕ್ ಟ್ರ್ಯಾಕಿಂಗ್, ಎಲ್ಲವು ಕೂಡ ಸಾಕಷ್ಟು ಕ್ರಮಬದ್ಧವಾಗಿ ಆಗಿತ್ತು. ಇನ್ಸ್‌ಪೆಕ್ಟರ್ ಸುರೇಶ್ ಕೂಡ ಇದರಲ್ಲಿ ಪ್ರಮುಖ ಪಾತ್ರ ಇದೆ. ಇನ್ನು ಕಾರ್ಯಚರಣೆಯ ತಂಡ ನೋಡೋದಾದ್ರೆ, ಇದರ ನೇತೃತ್ವ ವಹಿಸಿದ್ದವರು ಎಸಿಪಿ ಶಿವಶಂಕರ್, ಪೊಲೀಸ್ ಇನ್ಸ್ಪೆಕ್ಟರ್‌ಗಳಾದ ಶ್ರೀಕಾಂತ್, ಮಹಾದೇವಸ್ವಾಮಿ, ಪ್ರಕಾಶ್, ಅಜರುದ್ದೀನ್, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಜಯಪ್ರಕಾಶ್, ಸಹಾಯಕ ಸಬ್ ಇನ್ಸ್ ಪೆಕ್ಟರ್ ಗಳಾದ ಅನಿಲ್ ಮತ್ತು ಅಲೆಕ್ಸ್, ಹೆಡ್ ಕಾನ್ಸ್ಟೇಬಲ್ ರಮೇಶ್, ಕಾಂತರಾಜು ಭಗತ್, ಶರೀಫ್, ಮಹಾದೇವು, ರಾಜು ಹಾಗೂ ಪೊಲೀಸ್ ಕಾನ್ಸ್ಟೇಬಲ್ ಜೀವನ್, ಗಿರೀಶ್, ಸಾಗರ್ ಮತ್ತು ಸಿಬ್ಬಂದಿ ಮಂಜುನಾಥ್, ಕಿಶೋರ್. ಲತೀಫ್, ಮಂಜು ಇದ್ದರು.
ಇದೆಲ್ಲದರ ಜವಾಬ್ದಾರಿ ತೆಗೆದುಕೊಂಡಿದ್ದು ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಪ್ರದೀಪ್ ಗುಂಟಿ. ಹೌದು ಅವರು ತೆಗೆದುಕೊಂಡ ನಿರ್ಣಯ, ತಂಡದ ಆಯ್ಕೆ, ಕ್ಷಣ ಕ್ಷಣದ ಮಾಹಿತಿ, ಲೋಕೆಷನ್, ಇದೆಲ್ಲವು ಸಹಕಾರ ನೀಡಿತ್ತು. ವಿಶೇಷ ಅಂದ್ರೆ ಪ್ರದೀಪ್ ಗುಂಟಿ ಸ್ಥಳ ಮಹಜಿರನ ವೇಳೆ ಬಸ್ ಟಿಕೆಟ್ ಪತ್ತೆ ಹಚ್ಚಿ ಏನು ಇಲ್ಲದ ಪ್ರಕರಣದಲ್ಲಿ ದೊಡ್ಡ ಮಟ್ಟದ ಸುಳಿವು ನೀಡಿದ್ರು. ಇದು ಕೇವಲ ಮೂರೇ ದಿನದಲ್ಲಿ ಆರೋಪಿಗಳನ್ನ ಎಡೆಮುರಿ ಕಟ್ಟಲು ಸಾಧ್ಯವಾಗಿತ್ತು. ಇವರಿಗೆ ಡಿಸಿಪಿ ಗೀತಾ ಪ್ರಸನ್ನ ಕೂಡ ಮಾಹಿತಿ ನೀಡುತ್ತ ಜೊತೆಯಾಗಿದ್ದು ಮತ್ತಷ್ಟು ಪ್ರಕರಣ ಬೇಧಿಸಲು ಬಲ ತುಂಬಿತ್ತು
ಪೊಲೀಸ್ ಆಯುಕ್ತರ ಸಮಯ ಪ್ರಜ್ಞೆ:
ಇಲ್ಲಿ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರ ಕಾರ್ಯವೈಖರಿ ಸಮಯ ಪ್ರಜ್ಞೆ ಮೆಚ್ಚಲೇ ಬೇಕು. ಸಾಕಷ್ಟು ತಾಳ್ಮೆ ವಹಿಸಿದ ಅವರು ಯಾವುದೇ ಕಾರಣಕ್ಕು ಆರೋಪಿಗಳನ್ನ ಬಿಡೋದಿಲ್ಲ. ಅವರನ್ನ ಬಂಧಿಸುತ್ತೇವೆಂದು ಹೇಳಿದ್ದರು. ಅಲ್ಲದೆ ಮಾಧ್ಯಮದಲ್ಲಿ ಏನೇ ಬಂದರು ಎಲ್ಲವನ್ನು ನೋಡುತ್ತ ಇದಕ್ಕೆ ಆರೋಪಿಗಳ ಬಂಧನವೇ ಉತ್ತರ ಎಂದು ಕಾಯುತ್ತಿದ್ದರು. ಅದರಂತೆ ಇವತ್ತು ಅವರ ತಾಳ್ಮೆ ಅವರ ಅನುಭವ ಹಾಗೂ ಕಾರ್ಯವೈಖರಿಯಲ್ಲಿ ತೋರಿಸಿದೆ ಎಂದರೆ ತಪ್ಪಾಗಲಾರದು.
ಮೈಸೂರು ಪೊಲೀಸರ ಈ ಕಾರ್ಯ ನಿಜಕ್ಕು ಇಡೀ ದೇಶವೇ ಕೊಂಡಾಡುವಂತದ್ದು. ಕೇವಲ ನಾಲ್ಕೇ ದಿನದಲ್ಲಿ ಎರಡು ಪ್ರಮುಖ ಪ್ರಕರಣ ಬೇಧಿಸಿ ಆರೋಪಿಗಳ ಎಡೆಮುರಿ ಕಟ್ಟಿದ್ದಾರೆ. ಇದು ಎಲ್ಲ ಅಪರಾಧಿಗಳಿಗು ಹಾಗೂ ಮುಂದೆ ಅಪರಾಧ ಮಾಡಲು ಚಿಂತನೆ ಇರುವವರಿಗು ಎಚ್ಚರಿಕೆ ಗಂಟೆಯೇ ಹೌದು.