ಮೈಸೂರು ಪೊಲೀಸ್ ಠಾಣೆ ಜನಸ್ನೇಹಿ ಮಾಡಲು ಮುಂದಾದ ಶಾಸಕ ರಾಮದಾಸ್!
1 min readಮೈಸೂರಿನಲ್ಲಿ ಕ್ರೈಂ ಹೆಚ್ಚಾದ ಕಾರಣ ಅದನ್ನ ಬೆಳೆವ ಮುನ್ನವೇ ಕಂಟ್ರೋಲ್ ಮಾಡಲು ಭರ್ಜರಿ ಸಿದ್ದತೆ ಆಗಿದೆ. ಅದರಂತೆ ಮೈಸೂರಿನ ಕೆ.ಆರ್ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲಾ ಪೊಲೀಸ್ ಠಾಣೆಯ ಅಧಿಕಾರಿಗಳ ಸಭೆ ನಡೆಸಲಾಯಿತು.
- ಅದರಲ್ಲು ಇನ್ನು 60 ದಿನಗಳ ಒಳಗೆ ಸೇಫ್ಟಿ ರಸ್ತೆಯ ವ್ಯವಸ್ಥೆ, ಸ್ಟ್ರೀಟ್ ಲೈಟ್, ಸರ್ಕಲ್ ಗಳು ಹಾಗೂ ಎಲ್ಲೆಲ್ಲಿ ಸಿ.ಸಿ.ಟಿ.ವಿ ಅಳವಡಿಸಬೇಕು ಎಂಬುದರ ಬಗ್ಗೆ ಯೋಜನೆ ರೂಪಿಸಲಾಯಿತು.
ನಮ್ಮ ಮನೆ ಪೊಲೀಸ್ ಠಾಣೆಯ ವಿಚಾರವನ್ನು ಹಾಗೂ ಜನ ಸ್ನೇಹಿ ಠಾಣೆಗಳನ್ನೂ ಮಾಡುವತ್ತ ಸೆಪ್ಟೆಂಬರ್ 12ರಂದು ಹಂತ ಹಂತವಾಗಿ ಕ್ಷೇತ್ರದಲ್ಲಿ ಚಾಲನೆ ನೀಡಲಿದ್ದೇವೆ ಎಂದು ಶಾಸಕ ರಾಮದಾಸ್ ಮಾಹಿತಿ ನೀಡಿದ್ದರು.