8 ವರ್ಷಗಳ ಕಾಲದಲ್ಲಿ ಭಾರತದ ಗೌರವ, ಘನತೆ ಹೆಚ್ಚಾಗಿದೆ: ಶಾಸಕ ಎಸ್.ಎ.ರಾಮದಾಸ್
1 min readಮೈಸೂರು: ಪ್ರಧಾನಿ ನರೇಂದ್ರ ಮೋದಿ ಆಡಳಿತದ 8 ವರ್ಷಗಳ ಕಾಲದಲ್ಲಿ ಭಾರತದ ಗೌರವ, ಘನತೆ ಹೆಚ್ಚಾಗಿದೆ ಅಂತ ಶಾಸಕ ಎಸ್.ಎ.ರಾಮದಾಸ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ 8 ವರ್ಷದ ಸಾಧನೆಗಳ ಕುರಿತು ಮೈಸೂರು ಜನಪ್ರತಿನಿಧಿಗಳಿಂದ ಸುದ್ದಿಗೋಷ್ಠಿ ನಡೆಯಿತು. ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕ ಎಸ್.ಎ.ರಾಮದಾಸ್, ಎಲ್ ನಾಗೇಂದ್ರ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡರು.
ಈ ವೇಳೆ ಮಾತನಾಡಿದ ಶಾಸಕ ಎಸ್.ಎ.ರಾಮದಾಸ್ ಮೈಸೂರಿನಲ್ಲಿ ಶೇ 100ರಷ್ಟು ನರೇಗಾ ಯಶಸ್ವಿಯಾಗಿದೆ. ಬಡವರಿಗೆ 5ಕೋಟಿ ಮನೆ ಮಂಜೂರು ಮಾಡಲಾಗಿದೆ. ಪ್ರಧಾನ ಮಂತ್ರಿ ಅವಾಜ್ ಯೋಜನೆಯಲ್ಲಿ ಕರ್ನಾಟಕ ಅತ್ಯುತ್ತಮ ಸಾಧನೆ ಮಾಡಿದೆ. ಭಾರತ 2025ಕ್ಕೆ 5ಬಿಲಿಯನ್ ಡಾಲರ್ ಎಕಾನಮಿ ಹೊಂದುತ್ತೆ. ಜನೌಷಧಿ ಕೇಂದ್ರಗಳಿಂದ ಜನಸಾಮಾನ್ಯರಿಗೆ ಅನುಕೂಲವಾಗಿವೆ. ಕೇಂದ್ರದ ಜನೌಷಧ ಬಳಕೆಯಲ್ಲಿ ಮೈಸೂರು 7ನೇ ಸ್ಥಾನದಲ್ಲಿದೆ. ಮೈಸೂರಿಗೆ 1600ಕೋಟಿ ಹಣವನ್ನು ಪೇಪರ್ ಮಿಲ್ ಅಭಿವೃದ್ಧಿಗೆ ನೀಡಿದ್ದಾರೆ ಎಂದರು.
ಪ್ರಸಾದ್ ಯೋಜನೆಯಲ್ಲಿ 5 ದೇವಸ್ಥಾನಗಳ ಅಭಿವೃದ್ಧಿ ಮಾಡಲಾಗ್ತಿದೆ. ಮೈಸೂರಿನ ಚಾಮುಂಡಿ ಬೆಟ್ಟಕ್ಕೆ 50ಕೋಟಿ ಅನುದಾನ ನೀಡಲಾಗಿದೆ. ಕೇಂದ್ರ ಸರ್ಕಾರ ಗ್ರಾ.ಪಂಗಳ ಬಲವರ್ಧನೆಗೆ ಒತ್ತು ನೀಡಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನದ ಅಂಗವಾಗಿ ಪ್ರಧಾನ ಮಂತ್ರಿಗಳ 8ನೇ ವರ್ಷದ ಸಾಧನೆಗಳನ್ನು ತಿಳಿಸುವ ಕೆಲಸ ಮಾಡ್ತಿದ್ದೇವೆ ಅಂತ ಸುದ್ದಿಗೋಷ್ಠಿಯಲ್ಲಿ ಶಾಸಕ ಎಸ್.ಎ.ರಾಮದಾಸ್ ಹೇಳಿಕೆ ನೀಡಿದ್ದಾರೆ.