ಬ್ರಿಟನ್ ನಲ್ಲಿ ಮದುವೆಯಾದ ನೋಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲ.
1 min read2012 ರಲ್ಲಿ ತಾಲಿಬಾನ್ ಬಂದೂಕುಧಾರಿಯಿಂದ ಗುಂಡೇಟಿನಿಂದ ಗಾಯಗೊಂಡು ಬದುಕುಳಿದ ಬಾಲಕಿಯರ ಶಿಕ್ಷಣದ ಪ್ರಚಾರಕಿ ಮತ್ತು ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸುಫ್ಜೈ ಅವರು ವಿವಾಹವಾಗಿದ್ದಾರೆ. ಈಗಂತ ಖುದ್ದು ಅವರೇ ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ. ಬ್ರಿಟನ್‌ನಲ್ಲಿ ವಾಸಿಸುವ 24 ವರ್ಷದ ಮಲಾಲ, ಪತಿಯ ಹೆಸರು ಅಸ್ಸರ್ ಎಂದು ಪರಿಚಯಿಸಿದ್ದು, ಬರ್ಮಿಂಗ್‌ಹ್ಯಾಮ್ ನಗರದಲ್ಲಿ ಅವರ ಕುಟುಂಬಗಳ ಸಮ್ಮುಖದಲ್ಲಿ ಮನೆಯಲ್ಲಿ ವಿವಾಹವಾಗಿದ್ದಾರೆ.
ಇಂದು ನನ್ನ ಜೀವನದಲ್ಲಿ ಅಮೂಲ್ಯವಾದ ದಿನವಾಗಿದೆ. ಅಸ್ಸರ್ ಮತ್ತು ನಾನು ಹೊಸ ಜೀವನಕ್ಕೆ ಕಾಲಿಟ್ಟೆವು ಎಂದು ಅವರು ಟ್ವಿಟರ್‌ನಲ್ಲಿ ಬರೆದು ನಾಲ್ಕು ಚಿತ್ರಗಳನ್ನು ತಮ್ಮ ಪೋಸ್ಟ್ ಮಾಡಿದ್ದಾರೆ.
ಮಲಾಲಾ ತನ್ನ ಗಂಡನ ಮೊದಲ ಹೆಸರನ್ನು ಹೊರತುಪಡಿಸಿ ಬೇರೆ ಯಾವುದೇ ಮಾಹಿತಿಯನ್ನು ನೀಡಲಿಲ್ಲ. ಇಂಟರ್ನೆಟ್ ಬಳಕೆದಾರರು ಅವರನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಹೈ-ಪರ್ಫಾರ್ಮೆನ್ಸ್ ಸೆಂಟರ್‌ನ ಜನರಲ್ ಮ್ಯಾನೇಜರ್ ಅಸರ್ ಮಲಿಕ್ ಎಂದು ಗುರುತಿಸಿದ್ದಾರೆ.