ಮೈಸೂರು : ಐದು ರೂಪಾಯಿ ನಾಣ್ಯ ನುಂಗಿ ನಾಲ್ಕು ವರ್ಷದ ಮಗು ಸಾವು.!
1 min readಆ ಮಗು ಖುಷಿಖುಷಿಯಾಗಿ ಆಟ ಆಡುತ್ತ ಇತ್ತು. ಆದ್ರೆ ಏಕಾಏಕಿ ಅಸ್ವಸ್ಥಳಾಗಿ ಕುಸಿದು ಬಿದ್ದು ಮೃತಪಟ್ಟಿತ್ತು. ಎಲ್ಲರು ಏನಾಯ್ತು ಏನಾಯ್ತು ಎನ್ನುವಾಗಲೇ ಎಲ್ಲರಿಗು ಅಚ್ಚರಿ ಕಾದಿತ್ತು. ಅದೇ ಆ ಪುಟ್ಟ ಕಂದಮ್ಮ ಐದು ರೂ ನಾಣ್ಯ ನುಂಗಿತ್ತು.
ಎಸ್, ಐದು ರೂಪಾಯಿ ನಾಣ್ಯ ನುಂಗಿದ ಆಯರಹಳ್ಳಿ ಗ್ರಾಮ ನಾಲ್ಕು ವರ್ಷದ ಹೆಣ್ಣು ಮಗು ಖುಷಿ ಮೃತ ಪಟ್ಟಿದೆ. ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಬಿಳಿಕೆರೆ ಹೋಬಳಿಯ ಆಯರಹಳ್ಳಿ ಗ್ರಾಮದ ನಿವಾಸಿಯಾಗಿರುವ ಮಗು, ಹಿರಿಕ್ಯಾತನಹಳ್ಳಿಯ ಅಜ್ಜಿ ಮನೆಯಲ್ಲಿತ್ತು. ಶುಕ್ರವಾರ ನಾಣ್ಯದೊಂದಿಗೆ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಮಗು ನಾಣ್ಯ ನುಂಗಿದೆ. ಮಗುವನ್ನ ಮೊದಲು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆನಂತರ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು ಚಿಕಿತ್ಸೆ ವೇಳೆಯೇ ಮಗು ಕೊನೆಯುಸಿರೆಳೆದಿದೆ. ಆದರೆ ಪೋಷಕರು ಪುಟ್ಟ ಕಂದಮ್ಮನನ್ನ ಕಳೆದುಕೊಂಡು ಕಣ್ಣೀರಿಡುತ್ತಿದ್ದಾರೆ.