Exclusive : ಮೈಸೂರು ದಸರಾ ಸಂಭ್ರಮ- ಸೆ.13ಕ್ಕೆ ಗಜಪಯಣ-? ಸೆ.16ಕ್ಕೆ ಅರಮನೆಗೆ ಎಂಟ್ರಿ!?

1 min read

ಕೊರೊನಾ ನಡುವೆ 2021ರ ದಸರಾ ಸಂಭ್ರಮ ಶುರುವಾಗಿದ್ದು ಈ ಬಾರಿ ಸರಳ ಹಾಗೂ ಸಂಪ್ರದಾಯಿಕ ದಸರಾ ಆಚರಣೆ ಸಿದ್ಧತೆ ನಡೆದಿದೆ. ಎರಡನೇ ಬಾರಿಗೆ ಅಂಬಾರಿ ಹೊರಲು ಬರಲಿದ್ದಾನೆ ಕೂಂಬಿಂಗ್ ಸ್ಪೇಷಲಿಸ್ಟ್ ಅಭಿಮನ್ಯು ಹೆಗಲಿಗೆ ಸಿಕ್ಕಿದೆ. ಈ ಬಾರಿಯ ದಸರಾದಲ್ಲಿ ಎಂಟು ಆನೆಗಳು ಭಾಗಿಯಾಗುಬ ಮಾಹಿತಿ ಲಭ್ಯವಾಗಿದ್ದು, 16ರ ಪಟ್ಟಿಯಲ್ಲಿ 8 ಆನೆಗಳ ಆಯ್ಕೆ ಖಚಿತ.ವಾಗಿದೆ. ನಾಳೆ ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಆನೆಗಳ ಪಟ್ಟಿ ಪ್ರಕಟ ಮಾಡಲಿದ್ದು, ಸೆ.13ರಂದೇ ಹುಣಸೂರಿನ ವೀರನಹೊಸಹಳ್ಳಿಯಿಂದ ಗಜಪಯಣ ಆರಂಭವಾಗಲಿದೆ ಸೆ.16 ರಂದು ಅಂಬಾವಿಲಾಸ ಅರಮನೆಗೆ ಗಜಪಡೆ ಎಂಟ್ರಿ ಕೊಡಲಿದ್ದು, ತನ್ನ ತಂಡದೊಂದಿಗೆ ಕ್ಯಾಪ್ಟನ್ ಅಭಿಮನ್ಯು ಎಂಟ್ರಿ ಕೊಡಲಿದ್ದಾನೆ.

ಕಳೆದ ಬಾರಿಯ ದಸರಾ ಗಜಪಡೆ ಸ್ವಾಗತ ಕಾರ್ಯಕ್ರಮ
  • 8ಆನೆಗಳನ್ನು ಮೈಸೂರಿಗೆ ಕರೆತರಲು ಅರಣ್ಯ ಇಲಾಖೆ ನಿರ್ಧಾರ ಮಾಡಿದ್ದು, ನಾಳೆ ದಸರಾ ಆನೆಗಳ ಪಟ್ಟಿ ಹಾಗೂ ಆನೆಗಳ ಬಗ್ಗೆ ತಯಾರಿಸಿರುವ ಕೈಪಿಡಿ ಬಿಡುಗಡೆ‌ಯಾಗಲಿದೆ. ಕೊರೊನಾ ಕಾರಣ ಈ ಬಾರಿಯೂ ಸರಳ, ಸಂಪ್ರದಾಯಿಕ ದಸರಾ ನೆರವೇರಲಿದ್ದು, ಕಳೆದ ಬಾರಿಯಂತೆ ಈ ಬಾರಿಯೂ ಅರಮನೆ ಅಂಗಳಕ್ಕಷ್ಟೇ ದಸರಾ ಸೀಮಿತವಾಗಿದೆ. ದಸರಾ ಮಹೋತ್ಸವಕ್ಕೆ ಕೇವಲ ಒಂದೇ ತಿಂಗಳು ಬಾಕಿಯಿದ್ದು, ಸೆ.10 ರ ನಂತರ ಮೈಸೂರಿಗೆ ಗಜಪಯಣದ ಮೂಲಕ ಆನೆಗಳನ್ನ ಕರೆತರಲು ಸಿದ್ಧತೆ ನಡೆಯುತ್ತಿದೆ.

-ಆನೆ ಶಿಬಿರಕ್ಕೆ ಭೇಟಿ ಕೊಟ್ಟು 16 ಆನೆಗಳ ಆರೋಗ್ಯ ಸ್ಥಿತಿ ಪರಿಶೀಲಿಸಿ, ತಾತ್ಕಾಲಿಕ ಪಟ್ಟಿ ತಯಾರಿಸಿ, ಬೆಂಗಳೂರಿನ ಪಿಸಿಸಿಎಫ್ ಕಚೇರಿಗೆ ಡಿಸಿಎಫ್ ಕರಿಕಾಳನ್ ರವಾನಿಸಿದ್ದರು. ಅಭಿಮನ್ಯು ನೇತೃತ್ವದಲ್ಲಿ 8 ಆನೆ ಬಳಸಿಕೊಳ್ಳಲು ಪಿಸಿಸಿಎಫ್ ಅನುಮತಿ ನೀಡಿದ್ದು, ಕಳೆದ ವರ್ಷದ ದಸರಾಗೆ ಮೂರು ಗಂಡಾನೆ, ಎರಡು ಹೆಣ್ಣಾನೆಯನ್ನಷ್ಟೇ ಕರೆತರಲಾಗಿತ್ತು. ಆದರೆ ಈ ಬಾರಿ ಎರಡು ಗಂಡಾನೆ ಹಾಗೂ ಒಂದು ಹೆಣ್ಣಾನೆಯನ್ನು ಹೆಚ್ಚುವರಿಗೆ ಕರೆ ತರಲಾಗುತ್ತದೆ. ಗಜಪಡೆಯಲ್ಲಿ 5 ಗಂಡಾನೆ, 3 ಹೆಣ್ಣಾನೆ ಸ್ಥಾನ ಪಡೆಯುವುದು ಖಚಿತವಾಗಿದೆ. ಈ ಸಾಲಿನ ದಸರಾ ಮಹೋತ್ಸವ ಅ.7ರಿಂದ 15 ವರೆಗೆ ಆನೆಗಳಿಗೆ ಕನಿಷ್ಠ ಒಂದು ತಿಂಗಳ ಕಾಲ ತರಬೇತಿ ನೀಡುವುದು ಅನಿವಾರ್ಯವಾಗಿದೆ.

ಈ ಸಾಲಿನ ದಸರಾದಲ್ಲಿ ಅಂಬಾರಿ ಹೊರಲಿರುವ ಕ್ಯಾಪ್ಟನ್ ಮತ್ತಿಗೋಡು ಶಿಬಿರದ ಅಭಿಮನ್ಯು, ಗೋಪಾಲಸ್ವಾಮಿ, ಆನೆಕಾಡು ಶಿಬಿರದ ವಿಕ್ರಮ, ದುಬಾರೆ ಶಿಬಿರದ ಕಾವೇರಿ, ಧನಂಜಯ, ನಾಗರಹೊಳೆಯ ದೊಡ್ಡಹರವೆ ಶಿಬಿರದ ಅಶ್ವತ್ಥಾಮ, ಬಂಡೀಪುರ ರಾಂಪುರ ಶಿಬಿರದ ಚೈತ್ರಾ ಹಾಗೂ ಲಕ್ಷ್ಮಿ ಪಾಲ್ಗೊಳ್ಳುವುದು ಖಚಿತವಾಗಿದೆ. ಇದೇ ಪ್ರಥಮವಾಗಿ 34 ವರ್ಷದ ಅಶ್ವತ್ಥಾಮ ದಸರಾಗೆ ಎಂಟ್ರಿ ಕೊಡಲಿದ್ದಾನೆ. ಕಿರಿಯ ಆನೆಯಾಗಿ ಲಕ್ಷ್ಮೀ ಎರಡನೇ ಬಾರಿಗೆ ದಸರಾದಲ್ಲಿ ಭಾಗಿಯಾಗಲಿದ್ದಾಳೆ. ಸೆ.8ಕ್ಕೆ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಆನೆ ಪಟ್ಟಿ ಬಿಡುಗಡೆಯಾಗಲಿದ್ದು, ನಾಡಹಬ್ಬ ಆಚರಣೆ, ಕಾರ್ಯಕ್ರಮಗಳ ಸ್ವರೂಪ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ಮೈಸೂರು ಜಿ.ಪಂ ಆವರಣದಲ್ಲಿ ದಸರಾ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ.

ಸಭೆಯಲ್ಲಿ ಸಚಿವರಿಂದ ಗಜಪಡೆಯ ಪಟ್ಟಿ ಬಿಡುಗಡೆಯಾಗಲಿದ್ದು, ಇದೇ ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಆನೆಗಳ ಕುರಿತಾದ ಬಣ್ಣದ ಚಿತ್ರವುಳ್ಳ ಕೈಪಿಡಿ ತಯಾರಿಸಿದ್ದು, ಸಚಿವರು ಬಿಡುಗಡೆ ಮಾಡಲಿದ್ದಾರೆ. ಇದೇ ಸಭೆಯಲ್ಲಿ ಗಜಪಯಣದ ದಿನಾಂಕವನ್ನು ಪ್ರಕಟಿಸಲಾಗುತ್ತದೆ. ಗಜಪಯಣಕ್ಕೆ ಸೆ.13, 15 ಹಾಗೂ 16 ಒಳ್ಳೆ ದಿನವಾಗಿದೆ. ಸೆ.13 ಬಾದ್ರಪದ ಸಪ್ತಮಿ ದಿನ ಆಗಿರುವುದರಿಂದ ಗಜಪಯಣಕ್ಕೆ ಒಳ್ಳೆದಿನ ಎನ್ನಲಾಗಿದೆ. ಸೆ.13ರಂದು ಆನೆಗಳು ಅರಮನೆ ಪ್ರವೇಶಿಸಲು ಒಳ್ಳೆದಿನ ಎಂದು ಗುರುತಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸೆ.13 ರಂದು ಬೆಳಿಗ್ಗೆ 11 ಗಂಟೆ ನಂತರ ಹುಣಸೂರು ತಾಲೂಕಿನ ವೀರನಹೊಸಳ್ಳಿ ಗೇಟ್ ಬಳಿ ಅಭಿಮನ್ಯು ನೇತೃತ್ವದ ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಮೈಸೂರಿನ ಅರಣ್ಯ ಭನವನಕ್ಕೆ ಕರೆತರಲಾಗುತ್ತದೆ. ಸೆ.16 ರಂದು ಅರಣ್ಯ ಭವನದಲ್ಲಿ ಅರಣ್ಯ ಇಲಾಖೆ ವತಿಯಿಂದ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ನಂತರ ಅರಮನೆಗೆ ಕರೆದುಕೊಂಡು ಬರಲು ಉದ್ದೇಶಿಸಲಾಗಿದೆ.

About Author

Leave a Reply

Your email address will not be published. Required fields are marked *