ದೇಶಕ್ಕೆ ಉತ್ತಮ ನಾಗರಿಕರನ್ನು ರೂಪಿಸಿವಲ್ಲಿ ಗುರುವಿನ ಪಾತ್ರ ಮಹತ್ವ ಅನನ್ಯ: ಶಾಸಕ ಜಿ.ಟಿ.ದೇವೇಗೌಡ.

1 min read

ಮೈಸೂರು : ದೇಶಕ್ಕೆ ಉತ್ತಮ ನಾಗರಿಕರನ್ನು ರೂಪಿಸಿಕೊಡುವಲ್ಲಿ ಗುರುವಿನ ಪಾತ್ರ ಮಹತ್ವ ಅನನ್ಯವಾದದ್ದು, ಪ್ರತಿಯೊಬ್ಬರೂ ತಮಗೆ ಮಾರ್ಗದರ್ಶನ ನೀಡಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಕಾರಣರಾದ ಗುರುಗಳನ್ನು ನೆನೆಯುವ ದಿನವೇ ಶಿಕ್ಷಕರ ದಿನಾಚರಣೆ ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.
ಅವರು ಇಂದು ಮೈಸೂರಿನ ಹೂಟಗಳ್ಳಿಯ ಸರಸ್ವತಿ ಕಲ್ಯಾಣ ಮಂಟಪದಲ್ಲಿ ನಡೆದ ಮೈಸೂರು ತಾಲ್ಲೂಕು ಶಿಕ್ಷಕರ ದಿನಾಚರಣೆಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಶಾಸಕರು. ಶ್ರೇಷ್ಠ ಶಿಕ್ಷಣ ತಜ್ಞರು, ಮಾಜಿ ರಾಷ್ಟçಪತಿಗಳು, ಭಾರತ ರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಇಂದು ನಾವು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದೇವೆ. ಶಿಕ್ಷಕರೆಂದರೆ ಇಂದಿನ ಪೀಳಿಗೆಗೆ ಒಂದು ವೃತ್ತಿಯಾಗಷ್ಟೇ ಸೀಮಿತವಾಗಿಬಿಟ್ಟಿದೆ. ಒಂದು ದೇಶ ಅಭಿವೃದ್ಧಿ ಹೊಂದಬೇಕಾದರೆ ಅದರಲ್ಲಿ ಶಿಕ್ಷಕರೇ ಜೀವಾಳವಾಗಿರುತ್ತಾರೆ. ಯಾವುದೇ ಕ್ಷೇತ್ರದಲ್ಲಾದರೂ ಶಿಕ್ಷಕ ಇಲ್ಲದೇ ಅಭಿವೃದ್ಧಿ ಅಸಾಧ್ಯ. ಓರ್ವ ಶಿಕ್ಷಕ ದೇಶದ ರಾಷ್ಟ್ರಪತಿಯಾಗಿ ಮಾದರಿ ವ್ಯಕ್ತಿತ್ವವಾಗಿ ಹೊರಹೊಮ್ಮಲು ಸಾಧ್ಯ ಎಂಬುದಕ್ಕೆ ಸರ್ವಪಲ್ಲಿ ರಾಧಾಕೃಷ್ಣನ್ ಅವರೇ ಉತ್ತಮ ಉದಾಹರಣೆ ಎಂದರು.

ಶಿಕ್ಷಕರಿಗೆ ಸನ್ಮಾನ ಮಾಡಿ ಗೌರವಿಸಿದ ಶಾಸಕ ಜಿಟಿ ದೇವೇಗೌಡ


ಕೋವಿಡ್-೧೯ ಸಂಕಷ್ಟ ಕಾಲದಲ್ಲಿ ಆನ್ ಲೈನ್ ನಲ್ಲಿ ಮತ್ತು ಇತರ ಮಾರ್ಗಗಳ ಮೂಲಕ ಮಕ್ಕಳಿಗೆ ಶಿಕ್ಷಣವನ್ನು ಧಾರೆಯೆರೆದ ಶಿಕ್ಷಕರ ಪಾತ್ರ ನಿಜಕ್ಕೂ ಶ್ಲಾಘನೀಯ ಎಂದರು. ಕೋವಿಡ್ ನಿಂದಾಗಿ ಕಳೆದ ಒಂದುವರೆ ವರ್ಷಗಳಿಂದ ಶಾಲೆಗಳು ತೆರೆದಿಲ್ಲ, ನಮ್ಮ ಕ್ಷೇತ್ರದ ವ್ಯಾಪ್ತಿಯ ಎಲ್ಲಾ ಶಾಲೆಗಳಿಗೆ ಮಕ್ಕಳಿಗೆ ಶುದ್ದ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ಆರ್.ಓ.ಪ್ಲಾಂಟ್‌ಗಳನ್ನು ಒದಗಿಸಲಾಗಿದೆ. ಮತ್ತೆ ಮಕ್ಕಳು ಶಾಲೆಗೆ ಬರಲು ಶಾಲೆಗಳ ಆವರಣದಲ್ಲಿ ಸುಂದರವಾದ ಉದ್ಯಾನವನನ್ನು ಗ್ರಾಮ ಪಂಚಾಯಿತಿಗಳ ಜೊತೆಗೂಡಿ ಮಾಡುವಂತೆ ತಿಳಿಸಿದರು.
ಇಂದಿನ ಪೀಳಿಗೆಯವರನ್ನು ಕೇಳಿ ನೋಡಿ, ನೀನು ಏನಾಗಬೇಕೆಂದು, ಅಪ್ಪಿ ತಪ್ಪಿ ಕೂಡ ನಾನೋರ್ವ ಶಿಕ್ಷಕನಾಗಬೇಕು ಎಂದು ಹೇಳುವುದಿಲ್ಲ. ಅವರ ದೃಷ್ಠಿಯೇನಿದ್ದರೂ ಇಂಜಿನಿಯರೋ ಡಾಕ್ಟರಾಗುವ ಗುರಿಯತ್ತ ಪಯಣ ಬೆಳೆಸಿರುತ್ತದೆ. ಹೀಗೆ ಎಲ್ಲರೂ ಶಿಕ್ಷಕ ವೃತ್ತಿಯಿಂದ ದೂರ ಉಳಿದರೆ ದೇಶದ ಸ್ಥಿತಿ ಏನಾಗಬೇಡ? ಸರ್ಕಾರಿ ಕೆಲಸವೆಂದರೆ ಜೀವನದಲ್ಲಿ ಸೆಕ್ಯೂರ್ಡ್ ಎಂಬ ಭಾವನೆ ಮೂಡುತ್ತದೆ. ಆದರೆ ಶಿಕ್ಷಕ ವೃತ್ತಿಗೆ ಹಾಗಲ್ಲ, ಅದರಲ್ಲಿಯೂ ಇಂದಿನ ಸರ್ಕಾರಿ ಶಾಲಾ ಶಿಕ್ಷಕರ ಸ್ಥಿತಿ ಉತ್ತಮವಾಗಿಲ್ಲ ಎಂಬುದAತೂ ಸತ್ಯ ಎಂದು ತಿಳಿಸಿದರು.
ಪ್ರಪಂಚವನ್ನೇ ಅರಿಯದ ಮಕ್ಕಳಿಗೆ ಪ್ರಪಂಚದ ಜ್ಞಾನ ತಿಳಿಸುವ ಶಿಕ್ಷಕರ ಕಾರ್ಯ ಅತ್ಯಂತ ಶ್ಲಾಘನೀಯ. ನಮ್ಮ ದೇಶಕ್ಕೆ ಉತ್ತಮ ಪ್ರಜೆಗಳನ್ನು ನೀಡುತ್ತಿರುವ ಶಿಕ್ಷಕ ವೃಂದಕ್ಕೆ ನನ್ನ ಅಭಿನಂದನೆಗಳು. ಶಿಕ್ಷೆಯ ಮೂಲಕ ಶಿಕ್ಷಣ ನೀಡಲು ಆಗದು ಶಿಕ್ಷಣವನ್ನು ಪ್ರೀತಿ-ವಿಶ್ವಾಸದ ಮೂಲಕ ಶಿಕ್ಷಕ ವೃಂದದವರಿಗೆ ನನ್ನ ಕೃತಜ್ಞತೆಗಳನ್ನು ತಿಳಿಸಿದರು.

ಶಿಕ್ಷಕರ ದಿನಾಚರಣೆ ಪುಷ್ಪಾರ್ಚನೆ ಮೂಲಕ ಆಚರಣೆ

ನಂತರ ಸಮಾರಂಭದಲ್ಲಿ ಕಳೆದ ವರ್ಷ ನಿವೃತ್ತಿ ಹೊಂದಿದ ಶಿಕ್ಷಕರಿಗೆ ಗೌರವವನ್ನು ಸಲ್ಲಿಸಲಾಯಿತು. ಸಮಾರಂಭದಲ್ಲಿ ಇ.ಓ.ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಲ್ಲೇಶದವರಿ, ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷರಾದ ಸತೀಶ್, ಉಪಾಧ್ಯಕ್ಷರು, ನಿರ್ದೇಶಕರುಗಳು, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಭಾಗಹಿಸಿದ್ದರು.

About Author

Leave a Reply

Your email address will not be published. Required fields are marked *