ಜೆ.ಎಸ್.ಎಸ್ ಪಬ್ಲಿಕ್ ಶಾಲೆಯಲ್ಲಿ ಲಸಿಕಾ ಅಭಿಯಾನ ಮುಂದುವರಿಕೆ
1 min readಮೈಸೂರು: ಮೈಸೂರಿನ ಜೆ.ಎಸ್.ಎಸ್ ಪಬ್ಲಿಕ್ ಶಾಲೆ ವಿನಯ ಮಾರ್ಗ ರಸ್ತೆಯ ಸಿದ್ದಾರ್ಥ ನಗರದಲ್ಲಿ ಮಾನ್ಯ ಶಾಸಕರಾದ ಎಸ್.ಎ ರಾಮದಾಸ್ ಅವರ ನೇತೃತ್ವದಲ್ಲಿ ಕೋವಿಡ್ ಲಸಿಕಾ ಕಾರ್ಯಕ್ರಮದ ಉದ್ಘಾಟನೆ ನಡೆದಿತ್ತು. ಅದರಂತೆ ಇಂದು ಕೂಡ ವಾರ್ಡ್ ನಂ.53 ರ ವಿನಯ ಮಾರ್ಗದಲ್ಲಿರುವ ಜೆ.ಎಸ್.ಎಸ್ ಶಾಲೆಯಲ್ಲಿ ಲಸಿಕಾ ಅಭಿಯಾನ ಮುಂದುವರಿಕೆಯಾಗಿದೆ.
ಇಂದು ಸಹ ಶಾಸಕರಾದ ರಾಮದಾಸ್ ಅವರ ನೇತೃತ್ವದಲ್ಲಿ ಲಸಿಕಾ ಅಭಿಯಾನ ನಡೆಯುತ್ತಿದ್ದು, ಲಸಿಕಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಹಲವು ಯುವಕರನ್ನ ಮಾತನಾಡಿಸಿ ನಿಮ್ಮ ಅಕ್ಕಪಕ್ಕದ ಮನೆಯಲ್ಲಿ ಇನ್ನೂ ಲಸಿಕೆ ತೆಗೆದುಕೊಳ್ಳದಿದ್ದಲ್ಲಿ ಅಂಥವರನ್ನು ಕರೆದುಕೊಂಡು ಬಂದು ಲಸಿಕೆ ಹಾಕಿಸಿ ಎಂದು ಕರೆ ಕೊಟ್ಟರು.
ಕೆ.ಆರ್ ಕ್ಷೇತ್ರದಲ್ಲಿ ನಡೆದ ಎರಡು ದಿನಗಳು ನಡೆದ ಲಸಿಕಾ ಅಭಿಯಾನದಲ್ಲಿ ಸುಮಾರು 9720 ಜನರಿಗೆ ಲಸಿಕೆ ನೀಡಲಾಗಿದೆ.
ವಿಶೇಷವಾಗಿ ಲಸಿಕಾ ಅಭಿಯಾನ ಚೆನ್ನಾಗಿ ನಡೆಯಬೇಕಾದರೆ ಆರೋಗ್ಯ ಸಿಬ್ಬಂದಿ, ವೈದ್ಯರು , ಪೊಲೀಸ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸ್ವಯಂಸೇವಕರ ಪಾತ್ರ ಬಹುದೊಡ್ಡದಿರುತ್ತದೆ ಆ ಕಾರಣಕ್ಕಾಗಿ ಅವರಿಗೆಲ್ಲ ಸನ್ಮಾನ ಮಾಡುವ ಕೆಲಸವನ್ನು ಶಾಸಕ ರಾಮದಾಸ್ ನೆರವೇರಿಸಿದರು.
ಇನ್ನು ಕಾರ್ಯಕ್ರಮದಲ್ಲಿ ನಗರಪಾಲಿಕಾ ಸದಸ್ಯರಾದ ಶ್ರೀಮತಿ ರೂಪ, ಸ್ವಯಂಸೇವಾ ಸಂಸ್ಥೆಯ ಸ್ವಯಂಸೇವಕರು ಹಾಜರಿದ್ದರು. ವಿಶೇಷವಾಗಿ ಬಿಜೆಪಿ ಕೆ.ಆರ್ ಕ್ಷೇತ್ರದ ಪದಾಧಿಕಾರಿಗಳು ನೆರೆದಿದ್ದವರಿಗೆ ಕೋವಿಡ್ ಮಾರ್ಗಸೂಚಿ ಪಾಲಿಸುವಲ್ಲಿ ಸಹಾಯ ಮಾಡಿದರು.