ಕಾಳಸಂತೆಯಲ್ಲಿ ರೆಮಿಡಿಸಿವಿಯರ್ ಔಷಧ ಮಾರಾಟ: ಐವರು ಸ್ಟಾಫ್ ನರ್ಸ್ ಗಳು ಪೊಲೀಸರ ಬಲೆಗೆ
1 min readಮೈಸೂರು: ಕಾಳಸಂತೆಯಲ್ಲಿ ರೆಮಿಡಿಸಿವಿಯರ್ ಔಷಧ ಮಾರಾಟ ಮಾಡುತ್ತಿದ್ದ ಎರಡು ಜಾಲಗಳನ್ನ ಮೈಸೂರು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಜಾಲದಲ್ಲಿ ಐವರು ಸ್ಟಾಫ್ ನರ್ಸ್ ಗಳು ಪೊಲೀಸರ ಬಲೆಗೆ ಬಿದ್ದಿದ್ದು. ರೋಗಿಗಳಿಗೆ ನೀಡಲು ಕೊಟ್ಟಿದ್ದ ರೆಮಿಡಿಸಿವಿಯರ್ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದರು.
ಕೆ.ಆರ್.ಆಸ್ಪತ್ರೆಯ ಸ್ಟಾಫ್ ನರ್ಸ್ ಗಳಾದ ಆಶೋಕ್,ರಾಘವೇಂದ್ರ. ಕಾಮಾಕ್ಷಿ ಆಸ್ಪತ್ರೆಯ ಸುರೇಶ್. ಗಿರೀಶ್ ಚಂದ್ರ ಆಸ್ಪತ್ರೆಯ ರಾಜೇಶ್ ಮತ್ತು ಮಲ್ಲೇಶ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರೋಗಿಗಳಿಗೆ ಕೊಡದೆ ಒಟ್ಟು 10 ರೆಮಿಡಿಸಿವಿಯರ್ ಇಂಜೆಕ್ಷನ್ ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು.