ಕ್ರೂರಿ ಕರೋನಾಗೆ ಮೈಸೂರಿನ ಪ್ರತಿಷ್ಠಿತ ಮಠದ ಸ್ವಾಮೀಜಿ ಮೃತ
1 min read
ಮೈಸೂರು: ಕ್ರೂರಿ ಕರೋನಾಗೆ ಮೈಸೂರಿನ ಪ್ರತಿಷ್ಠಿತ ಮಠದ ಸ್ವಾಮೀಜಿಗಳು ಮೃತಪಟ್ಟಿದ್ದಾರೆ. ಕರೋನಾ ಸೋಂಕಿಗೆ ಆದಿಚುಂಚನಗಿರಿ ಶಾಖಾ ಮಠದ ಸ್ವಾಮೀಜಿ ಕೊನೆಯುಸಿರೆಳಿದಿದ್ದಾರೆ.
ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆಯ ಆದಿಚುಂಚನಗಿರಿ ಶಾಖಾ ಮಠದ 62 ವರ್ಷದ ಶಿವಾನಂದ ಸ್ವಾಮೀಜಿ ಬಲಿಯಾಗಿದ್ದಾರೆ. ಕಳೆದ 20 ವರ್ಷಗಳಿಂದ ಸ್ವಾಮೀಜಿಯಾಗಿ ಮಠದಲ್ಲಿ ಸೇವೆ ಸಲ್ಲಿಸುತ್ತಿದ್ದು ಎರಡು ದಿನದ ಹಿಂದೆ ಮಂಡ್ಯದ ನಾಗಮಂಗಲ ತಾಲೂಕಿನಲ್ಲಿ ಆಸ್ಪತ್ರೆಗೆ ದಾಖಲಾಗಿದ್ರು. ಈ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಸ್ವಾಮೀಜಿ ಇಹಲೋಕ ತ್ಯಜಿಸಿದ್ದಾರೆ.

ಸ್ವಾಮೀಜಿಗಳು ಸಾಕಷ್ಟು ಸೇವೆ ಮಾಡಿದ್ದು ವಿದ್ಯಾರ್ಥಿಗಳ ರಕ್ಷಣೆ, ಉತ್ತಮವಾದ ಕಟ್ಟಡ ನಿರ್ಮಾಣ ಮಾಡಿ ಹೆಸರು ಸಾಕಷ್ಟು ಹೆಸರುವಾಸಿಯಾಗಿದ್ದರು.