ನಾಳೆ ಮಹಾರಾಜ ಕಾಲೇಜ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಯೋಗ ಪೂರ್ವಭಾವಿ ತಾಲೀಮು!
1 min readಮೈಸೂರು – ಈ ಬಾರಿಯ ಜೂನ್ 21ರ ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೈಸೂರಿಗೆ ಆಗಮಿಸುವ ಹಿನ್ನೆಲೆ ಯೋಗನಗರಿ ಮೈಸೂರಿನಲ್ಲಿ ಈಗಾಗಲೇ ಸಿದ್ಧತೆ ಭರದಿಂದ ಸಾಗಿದೆ.
2022ನೇ ಸಾಲಿನ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವಭಾವಿ ತಾಲೀಮನ್ನು ಮೈಸೂರು ಯೋಗ ಫೆಡರೇಶನ್ ವತಿಯಿಂದ ಮೇ 22ರ ಭಾನುವಾರ ಬೆಳಗ್ಗೆ 6 ಗಂಟೆಯಿಂದ 7.30ರವರೆಗೆ, ಮಹಾರಾಜ ಕಾಲೇಜು ಕ್ರಿಕೆಟ್ ಗ್ರೌಂಡ್, ಮೈಸೂರು ಯೂನಿವರ್ಸಿಟಿಯ ಕೃಷ್ಣರಾಜ ಬುಲೇವಾರ್ಡ್ ರೋಡ್ ಮೈಸೂರು ಇಲ್ಲಿ ಜರುಗಲಿದೆ.
ಇದೇ ವೇಳೆ ಅಂತರಾಷ್ಟ್ರೀಯ ಯೋಗ ದಿನದ ಶಿಷ್ಟಾಚಾರದ ಬಗ್ಗೆ ಜನರಿಗೆ ಅರಿವು ಮೂಡಿಸಿ, ತರಬೇತಿ ನೀಡಲು ಯೋಗ ತರಬೇತುದಾರರನ್ನೂ ತಯಾರಿ ಮಾಡಲಾಗುತ್ತದೆ. ಭಾನುವಾರದ ಈ ಕಾರ್ಯಕ್ರಮಕ್ಕೆ ಮೈಸೂರಿನ ಎಲ್ಲಾ ಯೋಗ ಸಂಸ್ಥೆಗಳು ಪಾಲ್ಗೊಳ್ಳಬೇಕಾಗಿ ವಿನಂತಿಸಲಾಗಿದೆ. ಸಾರ್ವಜನಿಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ ಎಂದು ಯೋಗ ಫೆಡರೇಷನ್‌ನ ಅಧ್ಯಕ್ಷರಾದ ಶ್ರೀಹರಿ ಅವರು ತಿಳಿಸಿದ್ದಾರೆ.