ವಿಶ್ವ ಯೋಗ ದಿನಕ್ಕೆ ಮೈಸೂರಿಗೆ ಮೋದಿ!
1 min readಮೈಸೂರು
ಜೂನ್ 21 ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನಲೆಯಲ್ಲಿ ಈ ಬಾರಿ ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ.
ಈ ಮೈಸೂರು ಕಾರ್ಯಕ್ರಮದ ಬಗ್ಗೆ ಪ್ರಧಾನಿ ಕಾರ್ಯಾಲಯ ದೃಢಪಡಿಸಿದ್ದು ರಾಜ್ಯ ಮುಖ್ಯ ಕಾರ್ಯದರ್ಶಿ ಪಿ ರವಿ ಕುಮಾರ್ ಅವರಿಗೆ ಪತ್ರ ಬರೆದು
ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡುವಂತೆ ಹೇಳಿದೆ.
– ಅಲ್ಲದೆ ಯೋಗ ದಿನಾಚರಣೆಯಲ್ಲಿ ಭಾಗವಹಿಸುವಂತೆ ಸಂಸದ ಪ್ರತಾಪಸಿಂಹ ಈ ಹಿಂದೆ ಭೇಟಿ ವೇಳೆ ಆಹ್ವಾನ ನೀಡಿದ್ದರು. ಕುಟುಂಬ ಸಮೇತ ಪ್ರಧಾನಿ ಭೇಟಿ ಮಾಡಿ ಆಹ್ವಾನ ನೀಡಿದ್ದು, ಜೂನ್ 21 ಹೊಸ ದಾಖಲೆ ಬರೆಯಲು ಸಾಂಸ್ಕ್ರತಿಕ ನಗರಿ ಮೈಸೂರು ಸಜ್ಜಾಗಿದೆ.