ಮೈಸೂರಿಗೆ ಸೆಮಿಕಂಡಕ್ಟರ್ ಫ್ಯಾಬ್ ಸ್ಥಾವರ ಸ್ಥಾಪನೆ- ಯದುವೀರ್ ಸಂತಸ!
1 min readಮೈಸೂರು : ರಾಜ್ಯ ಸರ್ಕಾರದಿಂದ ಇಸ್ರೇಲ್ ಮೂಲದ ಕಂಪನಿ ಜೊತೆ ಒಪ್ಪಂದ ವಿಚಾರ. ಒಪ್ಪಂದವನ್ನು ಸ್ವಾಗತಿಸಿದ ಯದುವಂಶದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್. ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿದ ಯದುವೀರ್. 22,900 ಕೋಟಿ ಹೂಡಿಕೆಯೊಂದಿಗಿನ ಒಪ್ಪಂದಕ್ಕೆ ಸಹಿ ಹಾಕಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರ ನಿರ್ಣಯ ಸ್ವಾಗತಿಸಿದ ಒಡೆಯರ್. ಸೆಮಿಕಂಡಕ್ಟರ್ ಫ್ಯಾಬ್ ಸ್ಥಾವರ ಸ್ಥಾಪಿಸಲು ಒಪ್ಪಂದ
ಇಸ್ರೇಲ್ ಮೂಲದ ISMC ಸಂಸ್ಥೆ ಜೊತೆ ಎಂಒಯುಗೆ ಸಹಿ ಆಗಿದೆ. ಮೈಸೂರಿನಲ್ಲಿ ಆರಂಭವಾಗಲಿರುವ ಘಟಕ
ಮೈಸೂರು ಉದ್ಯಮದ ವಿಚಾರದಲ್ಲಿ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಈ ಒಪ್ಪಂದಿಂದ ಆರ್ಥಿಕ ಅಭಿವೃದ್ದಿಯಾಗಲಿದೆ.
ದೇಶ, ರಾಜ್ಯ ಮತ್ತು ಮೈಸೂರಿನ ಬೆಳವಣಿಗೆಗೆ ಪೂರಕವಾಗಲಿದೆ. ಐಟಿ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಅವರಿಗೂ ಅಭಿನಂದನೆ ಸಲ್ಲಿಸಿದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್