ಫೋರ್ಬ್ಸ್ ಮ್ಯಾಗಜಿನ್ ನಲ್ಲಿ ಮಿಂಚಿದ ನಟ ಯಶ್!
1 min readಪ್ರತಿಷ್ಟಿತ ಫೋರ್ಬ್ಸ್ ನಿಯತಕಾಲಿಕೆ ಇದೇ ಮೊದಲ ಬಾರಿಗೆ ದಕ್ಷಿಣ ಭಾರತದ ಸೆಲೆಬ್ರಿಟಿಗಳಿಂದ ಕೂಡಿರುವ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿದೆ. ಇನ್ನೊಂದು ವಿಶೇಷವೆಂದರೆ, ಈ ಸೆಲೆಬ್ರಿಟಿ ಎಡಿಷನ್‌ನಲ್ಲಿ ಕನ್ನಡದ ನಟ ಯಶ್ ಕೂಡ ಸ್ಥಾನ ಪಡೆದುಕೊಂಡಿದ್ದಾರೆ.
ಇನ್ನೂಳಿದಂತೆ ತಮಿಳಿನಿಂದ ನಯನತಾರಾ, ಮಲಯಾಳಂನಿಂದ ದುಲ್ಕರ್ ಸಲ್ಮಾನ್ ಈ ಎಡಿಷನ್‌ನಲ್ಲಿ ಸ್ಥಾನ ಪಡೆದುಕೊಂಡಿರುವ ಇತರ ಸೆಲೆಬ್ರಿಟಿಗಳಾಗಿದ್ದಾರೆ. ಇನ್ನು ಈ ಕುರಿತು ಫೋರ್ಬ್ಸ್ ನಿಯತಕಾಲಿಕೆ ತನ್ನ ಅಧಿಕೃತ ಟ್ವಿಟ್ಟರ್‌ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ.
ಈ ಸೆಲೆಬ್ರಿಟಿ ಎಡಿಷನ್‌ನಲ್ಲಿ ಯಶ್ ಕಪ್ಪು ಬಣ್ಣದ ಕೋಟ್ ಮತ್ತು ಬಿಳಿ ಬಣ್ಣದ ಟೀ ಶರ್ಟ್ ಧರಿಸಿ, ತಮ್ಮದೇ ಡಿಫರೆಂಟ್ ಹೇರ್ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಫೋರ್ಬ್ಸ್ ಸೆಲೆಬ್ರಿಟಿ ಮ್ಯಾಗಜಿನ್‌ನಲ್ಲಿ ಯಶ್ ಕಾಣಿಸಿಕೊಳ್ಳುತ್ತಿದ್ದಂತೆ, ಯಶ್ ಅಭಿಮಾನಿಗಳ ಸಂಭ್ರಮ ಕೂಡ ಜೋರಾಗುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ಯಶ್ ಬಾಸ್ ಎಂಬ ಹ್ಯಾಶ್ ಟ್ಯಾಗ್‌ನಲ್ಲಿ ಪೋಟೋ ವೈರಲ್ ಆಗುತ್ತಿದೆ.