ವಿಶ್ವ ಪ್ರವಾಸೋದ್ಯಮ ದಿನ: ಜೂಗೆ ಆಗಮಿಸಿದ ಪ್ರವಾಸಿಗರಿಗೆ ಸಿಹಿ, ಹೂ ನೀಡಿ ಸ್ವಾಗತ

1 min read

ಮೈಸೂರು,ಸೆ.27-ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಮೃಗಾಲಯ ವೀಕ್ಷಣೆಗೆ ಬಂದಿದ್ದ ಪ್ರವಾಸಿಗರಿಗೆ ಸಿಹಿ ಹಾಗೂ ಹೂ ನೀಡಿ ಸ್ವಾಗತಿಸಲಾಯಿತು.
ಕರ್ನಾಟಕ ಮೃಗಾಲಯ ಪ್ರಾಧಿಕಾರ ಮತ್ತು ಅಪೂರ್ವ ಸ್ನೇಹ ಬಳಗದ ವತಿಯಿಂದ ಮೃಗಾಲಯ ಮುಂಭಾಗ ಪ್ರವಾಸಿಗರಿಗೆ ಮೈಸೂರ್ ಪಾಕ್ ಹಾಗೂ ಗುಲಾಬಿ ಹೂ ನೀಡಿ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್ ಮಹದೇವಸ್ವಾಮಿ, ಪ್ರವಾಸೋದ್ಯಮಕ್ಕೆ ಅದ್ಭುತ ಅವಕಾಶಗಳು ಇಲ್ಲಿವೆ. ಮೈಸೂರು ದಕ್ಷಿಣ ಭಾರತದ ಪ್ರಮುಖ ಕೇಂದ್ರವಾಗಿದೆ. ಪ್ರವಾಸಿ ತಾಣಗಳಿಗೆ ಹೋಗುವ ಪ್ರವಾಸಿಗರು ಪರಿಸರ ಸಂರಕ್ಷಣಾ ಮನೋಭವಾ ಬೆಳೆಸಿಕೊಳ್ಳಬೇಕಿದೆ. ಮೈಸೂರು ಪ್ರವಾಸಿ ತಾಣಗಳ ಅಭಿವೃದ್ಧಿ ಪರಿಸರಕ್ಕೆ ಪೂರಕವಾಗಿದೆ. ಕೆಲವು ಖಾಸಗಿ ವಲಯಗಳಲ್ಲಿ ಹಲವು ಕಡೆ ಪ್ರವಾಸಿಗರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡುವ ಹಿನ್ನೆಲೆಯಲ್ಲಿ ಮಾನವ ನಿರ್ಮಿತ ಕಟ್ಟಡಗಳು ಹೆಚ್ಚಾಗುತ್ತಿವೆ. ಇದರಿಂದಾಗಿ ಪ್ರಾಕೃತಿಕ ಆಕರ್ಷಣೆ ಕಳೆದು ಹೋಗಬಾರದು ಎಂದು ಎಚ್ಚರಿಸಿದರು.
ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಎಸ್.ಇ ಗಿರೀಶ್, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್ ಸದಸ್ಯರಾದ ಜ್ಯೋತಿ ರೇಚಣ್ಣ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯೆ ಲಕ್ಷ್ಮೀದೇವಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ರಾಜ್ಯ ಅಭಿವೃದ್ಧಿ ನಿಗಮ ನಿರ್ದೇಶಕ ರೇಣುಕರಾಜ , ರವಿಶಂಕರ್ ಅಜಯ್ ಶಾಸ್ತ್ರಿ ರಾಕೇಶ್‌ ಕುಂಚಿಟಿಗ ಇತರರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *