ತಾಯಿಯ ಬೆನ್ನಲ್ಲೇ ಕರೊನಾದಿಂದಾಗಿ ಸಹೋದರಿಯನ್ನೂ ಕಳೆದುಕೊಂಡ ವೇದಾ ಕೃಷ್ಣಮೂರ್ತಿ
1 min readಕಡೂರು: ಕರ್ನಾಟಕದ ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಅವರ ಸೋದರಿ ಕೊರೋನಾಗೆ ಬಲಿಯಾಗಿದ್ದಾರೆ. ದುರಂತ ಎಂದರೆ ಕೆಲದಿನಗಳ ಹಿಂದೆ ತಾಯಿಯನ್ನೂ ಸಹ ಕಳೆದು ಕೊಂಡಿದ್ರು.
ಕೋವಿಡ್ ಸೋಂಕಿತರಾಗಿದ್ದ ವೇದಾಕೃಷ್ಣಮೂರ್ತಿ ಸಹೋದರಿ ವತ್ಸಲಾ ಕೃಷ್ಣಮೂರ್ತಿ ಅವರು ಚಿಕ್ಕಮಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಆದರೆ ಬುಧವಾರ ತಡರಾತ್ರಿ ಮೃತಪಟ್ಟಿದ್ದಾರೆ.
ಕಳೆದ ವಾರವಷ್ಟೇ ವೇದಾಕೃಷ್ಣಮೂರ್ತಿ ತಾಯಿ ಚಲುವಾಂಬ (63) ಕೋವಿಡ್‌ಗೆ ಬಲಿಯಾಗಿದ್ದರು. ತಾಯಿ ಅವರ ಅಂತ್ಯಸಂಸ್ಕಾರ ನಡೆದ ಕಡೂರು ಬಳಿ ಇರುವ ಜಮೀನಿನಲ್ಲಿಯೇ ಸಹೋದರಿಯ ಅಂತ್ಯಸಂಸ್ಕಾರ ಕೂಡ ನೆರವೇರಲಿದೆ ಎಂಬ ಮಾಹಿತಿ ಇದೆ.