ಕೊರೋನಾದಿಂದ ಮೃತಪಟ್ಟ ಪತಿ: ಪತಿಯ ಅಂತ್ಯಕ್ರಿಯೆಯ ನಂತರ ಪತ್ನಿ ನೇಣಿಗೆ ಶರಣು

1 min read

ನಾಗಮಂಗಲ(ಮಂಡ್ಯ): ಕೋವಿಡ್ ಸೋಂಕಿನಿಂದ ಬೆಂಗಳೂರಿನಲ್ಲಿ ನಿನ್ನೆ ಬೆಳಿಗ್ಗೆ ಕಿರಣ್ ಎಂಬುವವರು ಮೃತಪಟ್ಟಿದ್ದು ಪತಿಯ ಅಂತ್ಯಕ್ರಿಯೆಯ ನಂತರ ಪತ್ನಿ ನೇಣಿಗೆ ಶರಣಾದ ಹೃದಯವಿದ್ರಾವಕ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

ನಾಗಮಂಗಲ ತಾಲ್ಲೂಕಿನ ಬಿಂಡಿಗನವಿಲೆ ಹೋಬಳಿಯ ಬೊಮ್ಮೇನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಕಿರಣ್ ಅಂತ್ಯಕ್ರಿಯೆ ಮುಗಿಸಿ ಮನೆಗೆ ಬಂದು ಕಿರಣ್ ಪತ್ನಿ ಪೂಜಾ ನೇಣಿಗೆ ಶರಣಾಗಿದ್ದಾರೆ. ಕಳೆದ ಹನ್ನೊಂದು ತಿಂಗಳ ಹಿಂದಷ್ಟೇ ಕಿರಣ್ ಮತ್ತು ಪೂಜಾ ಮದುವೆಯಾಗಿದ್ದರು.

ಕಿರಣ್ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಈ ಹೃದಯವಿದ್ರಾವಕ ಘಟನೆಯಿಂದ ಗ್ರಾಮದಲ್ಲಿ ನೀರವಮೌನ ಉಂಟಾಗಿದೆ.

About Author

Leave a Reply

Your email address will not be published. Required fields are marked *