ವಾಟ್ಸ್ಆಯಪ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಸರ್ವರ್ ಡೌನ್: ವಿಶ್ವದಾದ್ಯಂತ ಬಳಕೆದಾರರ ಪರದಾಟ
1 min readನವದೆಹಲಿ,ಅ.4-ಸಾಮಾಜಿಕ ಜಾಲತಾಣಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಸೋಷಿಯಲ್ ಮೀಡಿಯಾ ಹಾಗೂ ಮೆಸೇಜಿಂಗ್ ದಿಗ್ಗಜ ಕಂಪನಿ ಆಗಿರುವ ವಾಟ್ಸ್ಆಯಪ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಸರ್ವರ್ ಡೌನ್ ಆಗಿದ್ದು, ಸಂವಹನ ವ್ಯವಸ್ಥೆಯಲ್ಲಿ ಭಾರಿ ವ್ಯತ್ಯಯವಾಗಿದೆ.
ಮಾರ್ಕ್ ಜುಕರ್ ಬರ್ಗ್ ಒಡೆತನದ ಫೇಸ್ಬುಕ್, ವಾಟ್ಸ್ಆಯಪ್, ಇನ್ಸ್ಟಾಗ್ರಾಮ್ ನಲ್ಲಿ ವ್ಯತ್ಯಯ ಉಂಟಾಗಿದ್ದು, ವಿಶ್ವದಾದ್ಯಂತ ಬಳಕೆದಾರರು ಪರದಾಡುವಂತಾಗಿದೆ. ತಾಂತ್ರಿಕ ದೋಷದಿಂದಾಗಿ ಈ ಮೂರು ಆಯಪ್ ಗಳು ಕಾರ್ಯನಿರ್ವಹಿಸುತ್ತಿಲ್ಲ.
ರಾತ್ರಿ 9 ಗಂಟೆ ಸುಮಾರಿಗೆ ಈ ಅಡಚಣೆ ಉಂಟಾಗಿದ್ದು, ಬಳಕೆದಾರರು ತಮಗೆ ಆದ ತೊಂದರೆಯಾಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಬಳಕೆದಾರರು ಟ್ವಿಟರ್ನಲ್ಲಿ ಸಮಸ್ಯೆ ಹೇಳಿಕೊಳ್ಳಲಾರಂಭಿಸಿರುವುದರಿಂದ ವಾಟ್ಸ್ಆಯಪ್ ಕುರಿತು ಲಕ್ಷಾಂತರ ಟ್ವೀಟ್ ಪೋಸ್ಟ್ ಆಗಿರುವುದರಿಂದ ಟ್ವಿಟರ್ನಲ್ಲಿ ಈಗಾಗಲೇ ಟ್ರೆಂಡಿಂಗ್ನಲ್ಲಿದೆ. ಅಲ್ಲದೆ ಮೆಸೇಜಿಂಗ್ಗೆ ಹಲವರು ಈಗ ಟೆಲಿಗ್ರಾಮ್ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಲು, ಇನ್ಸ್ಟಾಲ್ ಮಾಡಿಕೊಳ್ಳಲು ಆರಂಭಿಸಿದ್ದಾರೆ.