ಮೈಸೂರಲ್ಲಿ 1 ತಿಂಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ತರುತ್ತೇವೆ: ರೋಹಿಣಿ ಸಿಂಧೂರಿ
1 min readಮೈಸೂರು: ಮೈಸೂರಲ್ಲಿ 1 ತಿಂಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ತರುತ್ತೇವೆ. ಸಂಪೂರ್ಣವಾಗಿ ಕೊರೊನಾ ಮುಕ್ತ ಮಾಡುವ ಪಣ ಇದೆ. ಜೊತೆಗೆ ನಿಂಯಂತ್ರಣಕ್ಕು ತರುತ್ತೇವೆ ಎಂದು ಮೈಸೂರಿನಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿಕೆ ನೀಡಿದ್ದಾರೆ.
ಪಾಸಿಟಿವ್ ಹೆಚ್ಚಿರುವುದಕ್ಕೆ ಆತಂಕ ಪಡಬೇಡಿ. ನಮ್ಮಲ್ಲಿ ಟೆಸ್ಟಿಂಗ್ ಕೂಡಾ ಹೆಚ್ಚಿನ ಪ್ರಮಾಣದಲ್ಲಿ ಮಾಡುತ್ತಿದ್ದೇವೆ. ಎಲ್ಲಾ ಅಂಕಿ ಅಂಶಗಳನ್ನು ವಾರ್ ರೂಂ ಮೂಲಕ ಬಿಡುಗಡೆ ಮಾಡುತ್ತಿದ್ದೇವೆ. ಬೆಂಗಳೂರಿನ ನಂತರ ಮೈಸೂರಿನಲ್ಲೇ ಹೆಚ್ಚಿನ ಅಂಕಿ ಅಂಶಗಳನ್ನು ನೀಡುತ್ತಿದ್ದೇವೆ. ಪಾಸಿಟಿವ್ ಹೆಚ್ಚಳಕ್ಕೆ ಆತಂಕ ಪಡಬೇಡಿ ಎಂದರು.
ಜುಲೈ ಒಂದರ ವೈದ್ಯರ ದಿನದಂದು ವೈದ್ಯರ ಸೇವೆ ಸ್ಮರಣೆ ಮಾಡೋಣ. ಕೊರೊನಾ ಮುಕ್ತ ಮೈಸೂರಿನ ಘೋಷಣೆಯನ್ನು ಅವರಿಗೆ ಅರ್ಪಿಸೋಣ. ಇದು ನಮ್ಮ ಸಂಕಲ್ಪ ಎಂದರು.
ನಾಳೆಯ ಲಾಕ್ಡೌನ್ ಬಗ್ಗೆ ಯಾವುದೇ ಗೊಂದಲ ಬೇಡ. ಜನ ತೀರಾ ಅಗತ್ಯವಿದ್ದರೆ ಮಾತ್ರ ಹೊರಬನ್ನಿ. ಆದಷ್ಟು ಜನತಾ ಕರ್ಫ್ಯೂ ನಿಯಮವನ್ನು ಅಳವಡಿಸಿಕೊಳ್ಳಿ ಅಂತ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದ್ದಾರೆ.