ಪೋಲಿಸರು-ಮಹಿಳೆ ನಡುವೆ ವಾಗ್ವಾದ: ಆಕ್ರೋಶ ಹೊರಹಾಕಿದ ಗರ್ಭಿಣಿ ಮಹಿಳೆ
1 min readಮೈಸೂರು: ಪೋಲಿಸರು – ಮಹಿಳೆ ನಡುವೆ ವಾಗ್ವಾದ ನಡೆದ ಘಟನೆ ಮೈಸೂರಿನ ರಾಮಸ್ವಾಮಿ ವೃತ್ತದ ಬಳಿ ನಡೆದಿದೆ. ವಾಗ್ವಾದದ ವೇಳೆ ಗರ್ಭಿಣಿ ಮಹಿಳೆ ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಮಹಿಳೆ ಸಂಬಂಧಿಯೊಡನೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ವಾಹನ ತಪಾಸಣೆ ಮಾಡುವ ವೇಳೆ ಪೊಲೀಸರು ಹಾಗೂ ಮಹಿಳೆ ನಡುವೆ ಮಾತಿನ ಚಕಮಕಿ ನಡೆದಿದೆ. ನಾನು ಗರ್ಭಿಣಿ ಹೊಟ್ಟೆ ನೋಯುತ್ತಿದೆ. ಆಸ್ಪತ್ರೆಗೆ ಹೋಗುತ್ತಿದ್ದೇನೆ ಎಂದು ಹೇಳಿದರು ಬಿಡುತ್ತಿಲ್ಲ ಎಂದು ಆರೋಪ ಮಾಡಿದ್ದಾರೆ. ಲೇಡಿ ಪೊಲೀಸ್ ಅಸ್ಯಭ್ಯ ವರ್ತನೆ ಮಾಡುತ್ತಿದ್ದಾರೆಂದ ಗರ್ಭಿಣಿ ಕಣ್ಣೀರಿಟ್ಟರು.
ಕೊನೆಗೆ ಮಹಿಳೆಯನ್ನು ಸಮಾಧಾನಪಡಿಸಿ ಪೊಲೀಸರು ಕಳುಹಿಸಿದರು.