ಮೈಸೂರು ಮಹತ್ವದ ಮಾಹಿತಿ- ನಾಳೆ ವೀಕೆಂಡ್ ಕರ್ಫ್ಯೂ ಮುಂದುವರಿಕೆ!
1 min readನಾಳೆ ಶನಿವಾರ 28/08/2021 ಹಾಗೂ ಭಾನುವಾರ 29/08/2021 ಮೈಸೂರು ಜಿಲ್ಲೆಯ ವೀಕೆಂಡ್ ಲಾಕ್‌ಡೌನ್ ಮುಂದುವರೆದಿದೆ. ವೀಕೆಂಡ್ ಕರ್ಫ್ಯೂವಿನಲ್ಲಿ ಸದ್ಯ ಯಾವುದೇ ಬದಲಾವಣೆ ಇಲ್ಲ. ಕೇವಲ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೂ ಅವಕಾಶವಿದ್ದು, ಹಾಲಿನ ಕೇಂದ್ರಗಳಿಗೆ ರಾತ್ರಿ 8 ಗಂಟೆಯವರೆಗೂ ಅವಕಾಶ ಕಲ್ಪಿಸಲಾಗಿದೆ. ಜೊತೆಯಲ್ಲಿ ಹೋಟೆಲ್‌ನಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.