ಮಾನಸ ಗಂಗೋತ್ರಿ- ಕುಕ್ಕರಳ್ಳಿ ಕೆರೆಗೆ ಸಂಜೆ 6.30ರ ನಂತರ ನಿರ್ಬಂಧ!

1 min read

ಮೈಸೂರಿನಲ್ಲಿ ಕಾಮುಕರ ಅಟ್ಟಹಾಸ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಕ್ಕರಹಳ್ಳಿ ಕೆರೆ ಮತ್ತು ಮಾನಸಗಂಗೋತ್ರಿ ಆವರಣದಲ್ಲಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದು, ಕೆರೆ ಆವರಣದಲ್ಲಿ ಸಂಜೆ 6.30ರ ನಂತರ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಲಾಗಿದೆ. ಸುರಕ್ಷಣಾ ದೃಷ್ಟಿ ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧ ಮಾಡಿದ್ದು, ವಿವಿ ಭದ್ರತಾ ಸಿಬ್ಬಂದಿಯಿಂದ ಸಂಜೆ 6 ರಿಂದ 9ರವರೆಗೆ ಗಸ್ತು ತಿರಗಲು ವ್ಯವಸ್ಥೆ ಮಾಡಲಾಗಿದೆ.

ಮೈಸೂರು ವಿವಿ ಸುತ್ತೋಲೆ

ಅಲ್ಲದೆ ಮಾನಸ ಗಂಗೋತ್ರಿಯ ಆವರಣದಲ್ಲು ಸಹ ಸಂಜೆ 6.30ರ ನಂತರ ಹೆಣ್ಣುಮಕ್ಕಳು ಒಂಟಿಯಾಗಿ ತಿರುಗಾಡುವುದನ್ನು ಕೂರುವುದನ್ನು ಸಹ ನಿಷೇಧಿಸಲಾಗಿದೆ. ಪೊಲೀಸ್ ಇಲಾಖೆಯ ಮೌಖಿಕ ನಿರ್ದೇಶನದ ಮೇರೆಗೆ ಮೈಸೂರು ವಿವಿ ಈ ಆದೇಶ ಹಾಗೂ ಸುತ್ತೋಲೆ ಹೊರಡಿಸಿದ್ದು, ವಿದ್ಯಾರ್ಥಿಗಳು ಇದನ್ನ ಪಾಲಿಸುವಂತೆ ಸೂಚಿಸಿದೆ.

About Author

Leave a Reply

Your email address will not be published. Required fields are marked *