ವೀಕೆಂಡ್ ಕರ್ಫ್ಯೂ ತೆರವು- ಸರ್ಕಾರದಿಂದ ಗುಡ್ ನ್ಯೂಸ್
1 min readಕಡೆಗು ವೀಕೆಂಡ್ ಕರ್ಫ್ಯೂವಿಗೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದ್ದು, ಜನಸಾಮಾನ್ಯರ ಆಕ್ರೋಶಕ್ಕೆ ಸರ್ಕಾರ ಮಣಿದಿದೆ. ಇಂದು ಸಚಿವರು ಹಾಗೂ ತಜ್ಞರ ಜೊತೆಗೂಡಿ ಗೃಹ ಕಚೇರಿ ಕೃಷ್ಣದಲ್ಲಿ ಸಭೆ ನಡೆಸಿದ ಸಿಎಂ ಬೊಮ್ಮಾಯಿ ಈ ನಿರ್ಧಾರ ಕೈಗೊಂಡಿದ್ದಾರೆ.
ಯಾವುದಕ್ಕೆಲ್ಲ ರೂಲ್ಸ್!
ಈಗಾಗಲೇ ವೀಕೆಂಡ್ ಕರ್ಫ್ಯೂವಿಗೆ ರಿಲ್ಯಾಕ್ಸ್ ನೀಡಿದ್ದು, ಕೆಲವೊಂದು ಕಾರ್ಯಕ್ರಮಗಳಿಗೆ ಕಠಿಣ ನಿರ್ಬಂಧ ಹೇರಲಾಗಿದೆ. ಅದರಲ್ಲಿ ಮದುವೆ ಕಾರ್ಯಕ್ರಮಗಳಿಗೆ ಯಥಾಸ್ಥಿತಿ ಅಂದರೆ ಕಠಿಣ ಕ್ರಮ ಇರಲಿದೆ.
ರ್ಯಾಲಿ, ಜಾತ್ರೆ, ರಾಜಕೀಯ ಸಮಾರಂಭಕ್ಕು ನಿರ್ಬಂಧ ಹೇರಲಾಗಿದೆ. ಆಗೊಮ್ಮೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾದರೆ ಕಠಿಣ ರೂಲ್ಸ್ ಅನಿವಾರ್ಯ ಎಂದು ಸಿಎಂ ಸಭೆಯಲ್ಲಿ ತೀರ್ಮಾನವಾಗಿದೆ.
ಇನ್ನು ಸಭೆ ಮುಕ್ತಾಯ ಹಂತದಲ್ಲಿದ್ದ ವೇಳೆ ಸಚಿವ ಆರ್ ಅಶೋಕ್ ಮಾಧ್ಯಮದ ಮುಂದರ ಬಂದು ವೀಕೆಂಡ್ ಕರ್ಫ್ಯೂ ತೆರವು ಆಗಿದರ ಎಂದು ಅಧಿಕೃತವಾಗಿ ಘೋಷಣೆ ಮಾಡಿದ್ರು. ಅಲ್ಲದೆ ಇದು ತಜ್ಞರ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಆಗೊಮ್ಮೆ ಇದು ಹೆಚ್ಚಾದರೆ ಖಂಡಿತ ವೀಕೆಂಡ್ ಕರ್ಫ್ಯೂ ಮುಂದುವರೆಯಲಿದೆ. ಅದಕ್ಕೆ ಜನರು ಅವಶ್ಯಕತೆ ಕೊಡಬೇಡಿ ಎಂದು ಮನವಿ ಮಾಡಿದ್ರು.