17 ವರ್ಷ ದಾಟಿದ ಎಲ್ಲಾ ಯುವಕ-ಯುವತಿಯರು ಮತದಾರರ ಚೀಟಿಗೆ ಅರ್ಜಿ ಸಲ್ಲಿಸಬಹುದು
-ಡಾ.ಬಿ.ಎಸ್ ಮಂಜುನಾಥ ಸ್ವಾಮಿ.
1 min read
17 ವರ್ಷ ದಾಟಿದ ಎಲ್ಲಾ ಯುವಕ-ಯುವತಿಯರು ಮತದಾರರ ಚೀಟಿಗೆ ಅರ್ಜಿ ಸಲ್ಲಿಸಬಹುದು
-ಡಾ.ಬಿ.ಎಸ್ ಮಂಜುನಾಥ ಸ್ವಾಮಿ.
ಮೈಸೂರು : 17 ವರ್ಷ ದಾಟಿದ ಎಲ್ಲಾ ಯುವಕ-ಯುವತಿಯರು ಮತದಾರರ ಚೀಟಿಗೆ ಅರ್ಜಿ ಸಲ್ಲಿಸಬಹುದು ಆದರೆ 18 ವರ್ಷದ ನಂತರ ಅವರನ್ನು ಸೇರಿಸುವಂತಹ ಕೆಲಸವನ್ನು ಚುನಾವಣಾ ಶಾಖೆ ಮಾಡುತ್ತದೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಡಾ. ಬಿ ಎಸ್ ಮಂಜುನಾಥ ಸ್ವಾಮಿ ಅವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಲ್ಲರೂ ಕೂಡ ಮತದಾರರ ಚೀಟಿಗೆ ಆಧಾರ್ ಕಾರ್ಡ್ ನಂಬರನ್ನು ಕಡ್ಡಾಯವಾಗಿ ಸೇರಿಸಬೇಕು. ಮತದಾರರ ಪಟ್ಟಿಯಲ್ಲಿ ನೊಂದಣಿಯಾಗಿರುವ ಮತದಾರರು ತಮ್ಮ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಿ ದೃಢೀಕರಿಸಲು 22ರ ಆಗಸ್ಟ್ 1, ರಿಂದ 2023ರ ಮಾರ್ಚ್ 31ರ ಒಳಗೆ ದೃಢೀಕರಿಸಲು ಅವಕಾಶವನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಮಾಹಿತಿಯನ್ನು ದೃಢೀಕರಿಸಲು ಆನ್ಲೈನ್ ಮತ್ತು ಆಫ್ಲೈನ್ ಎರಡರಲ್ಲೂ ಅವಕಾಶವಿದೆ ಆನ್ಲೈನ್ ವ್ಯವಸ್ಥೆಯಡಿ ಎನ್ ವಿ ಎಸ್ ಪಿ ಮತ್ತು ವಿಹೆಚ್‌ಎ ಆಪ್ ನಲ್ಲಿ ಮತದಾರರು ಮಾಹಿತಿಯನ್ನು ದೃಢೀಕರಿಸಲು ಅವಕಾಶವಿದೆ ಎಂದು ಹೇಳಿದರು. ಈ ಸಭೆಯಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.