ಲೈಂಗಿಕ ಕಾರ್ಯಕರ್ತರಿಗೂ ವೋಟರ್ ಐಡಿ, ಆಧಾರ್ ಕಾರ್ಡ್
1 min readನವದೆಹಲಿ,ಜ.11-ಲೈಂಗಿಕ ಕಾರ್ಯಕರ್ತೆಯರ ವಿಚಾರವಾಗಿ ಸುಪ್ರೀಂ ಕೋರ್ಟ್ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಲೈಂಗಿಕ ಕಾರ್ಯಕರ್ತರಿಗೂ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಪಡಿತರ ಚೀಟಿ ನೀಡಿ ಎಂದು ಹೇಳಿದೆ.
ಈ ಬಗ್ಗೆ ರಾಜ್ಯ ಸರಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತಾಕೀತು ಮಾಡಿರುವ ಸುಪ್ರೀಂ ಕೋರ್ಟ್ ಈ ಪ್ರಕ್ರಿಯೆ ಎರಡು ವಾರಗಳೊಳಗೆ ಪೂರ್ಣಗೊಳಿಸಬೇಕು ಎಂದಿದೆ.
ದೇಶದಲ್ಲಿ ಬಹುದೊಡ್ಡ ಜನಸಂಖ್ಯೆಯಲ್ಲಿ ಲೈಂಗಿಕ ಕಾರ್ಯಕರ್ತರು ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಅವರಿಗೆ ಅವರ ವಾಸಸ್ಥಳದ ದಾಖಲೆಗಳನ್ನು ಕಡ್ಡಾಯ ಹಾಜರುಪಡಿಸುವಲ್ಲಿ ವಿನಾಯಿತಿ ನೀಡಿ ಪಡಿತರ ಚೀಟಿಗಳನ್ನು ನೀಡುವಂತೆ ಸರ್ಕಾರಗಳಿಗೆ ಜಸ್ಟಿಸ್ ನಾಗೇಶ್ವರ ರಾವ್ ಮತ್ತು ಜಸ್ಟಿಸ್ ವಿ.ಆರ್. ಗವಾಯಿ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ಜೊತೆಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮತ್ತು ವಿವಿಧ ಸಂಘಟನೆಗಳ ಸಹಾಯದಿಂದ ಲೈಂಗಿಕ ಕಾರ್ಯಕರ್ತರನ್ನು ಗುರುತಿಸಿ ಈ ಕುರಿತ ಪಟ್ಟಿಯನ್ನು ಸಂಗ್ರಹಿಸುವಂತೆ ರಾಜ್ಯ ಸರಕಾರಗಳಿಗೆ ಸೂಚಿಸಲಾಗಿದೆ.