ಸ್ವಾತಂತ್ರ್ಯ ವೀರ ಸಾವರ್ಕರ್ ೧೩೯ನೇ ಜನ್ಮ ಜಯಂತಿ ಆಚರಣೆ
1 min readಮೈಸೂರು: ಸ್ವಾತಂತ್ರ್ಯ ವೀರ ಸಾವರ್ಕರ್ ೧೩೯ನೇ ಜನ್ಮ ಜಯಂತಿ ಹಾಗೂ ವೀರ ಸಾವರ್ಕರ್ ಯುವ ಬಳಗದ ೧೮ನೇ ವಾರ್ಷಿಕೋತ್ಸವವನ್ನು ದೇವರಾಜ ತ್ರಿಪುರಭೈರವಿ ಮಠದ ಆಂಜನೇಯ ದೇಗುಲದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷರಾದ ಪ್ರಮೋದ್ ಮುತಾಲಿಕ್ ರವರು ಸಾವರ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ಸಾವರ್ಕರ್ ರವರ ಜೀವನ ಜೈಲುವಾಸದ ಕುರಿತು ವಿಸ್ತಾರವಾಗಿ ಮಾತನಾಡಿದರಲ್ಲದೇ ಸಾವರ್ಕರ್ ಅವರು ತೋರಿಸಿಕೊಟ್ಟ ಹೋರಾಟದ ಹಾದಿಯಲ್ಲಿ ಸರ್ವರೂ ಮುನ್ನಡೆಯಬೇಕೆಂದು ತಿಳಿಸಿದರು.
ಹಿಜಾಬ್, ಆಜ಼ಾನ್ ವಿಚಾರದಲ್ಲಿ ಹಠ ಧೋರಣೆ ಬಿಟ್ಟು ಸರ್ವೋಚ್ಚ ನ್ಯಾಯಾಲಯದ ಆದೇಶ ಪಾಲಿಸಬೇಕು. ಮೋದಿ ಆಜಾನ್ ವಿಚಾರದಲ್ಲಿ ಎರಡನೇ ಹಂತದ ಹೋರಾಟವನ್ನು ಮತ್ತಷ್ಟು ತೀವ್ರವಾಗಿ ಸದ್ಯದಲ್ಲೇ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ತ್ರಿಪುರ ಭೈರವಿ ಮಠದ ಶ್ರೀ ಕೃಷ್ಣಮೋಹನಾನಂದಗಿರಿ ಗೋಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು, ವೀರ ಸಾವರ್ಕರ್ ಯುವ ಬಳಗದ ಅಧ್ಯಕ್ಷರಾದ ರಾಕೇಶ್ ಭಟ್, ನಗರ ಪಾಲಿಕೆ ಸದಸ್ಯರಾದ ಪ್ರಮಿಳಾ ಭರತ್, ಎಲ್.ಜಗದೀಶ್, ಶ್ರೀರಾಮಸೇನೆಯ ನಗರಾಧ್ಯಕ್ಷ ಸಂಜಯ್, ಸಾವರ್ಕರ್ ಬಳಗದ ಸಂದೇಶ್ ಪವಾರ್, ಅನುಜ್ ಸಾರಸ್ವತ್, ದೀಪಕ್, ವಿಕ್ರಮ್ ಅಯ್ಯಂಗಾರ್, ಜಯಸಿಂಹ, ಅಜಯ್ ಶಾಸ್ತ್ರಿ, ಟಿ.ಎಸ್.ಅರುಣ್, ಪ್ರದೀಪ್, ರವಿ ಕುಂಚಿಟಿಗ, ಮಹೇಶ್ ಕುದೇರು, ಗುರುರಾಜ್ ಶೆಟ್ಟಿ, ಪ್ರಮೋದ್ ಗೌಡ, ಬಿಜೆಪಿ ಮುಖಂಡರಾದ ಬಿ.ಎಂ.ರಘು, ಸಚಿನ್, ಬಿ.ಸಿ.ಶಶಿಕಾಂತ್, ಪ್ರತಾಪ್ ದಟ್ಟಗಳ್ಳಿ, ಬೇಗೂರು ಘಟಕದ ಶ್ರೀರಾಮಸೇನೆ ಸದಸ್ಯರು ಭಾಗವಹಿಸಿದ್ದರು.