ಯಡಿಯೂರಪ್ಪ ಆಡಳಿತದಲ್ಲಿ ಮಠಗಳನ್ನ ಅಪವಿತ್ರ ಮಾಡಿದ್ದಾರೆ: ವಾಟಾಳ್ ನಾಗರಾಜ್

1 min read

ಮೈಸೂರು: ಸಿಎಂ ಪರ ಮಠಾಧೀಶರ ಬ್ಯಾಟಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡ ಚಳುವಳಿ ವಾಟಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದು, ಮಠಾಧೀಶರನ್ನ ದೇವರೇ ಕಾಪಾಡಬೇಕು. ಯಡಿಯೂರಪ್ಪ ಆಡಳಿತದಲ್ಲಿ ಮಠಗಳನ್ನ ಅಪವಿತ್ರ ಮಾಡಿದ್ದಾರೆ ಅಂತ ಹೇಳಿದ್ದಾರೆ.

ಮಠಗಳಿಗೆ ಐತಿಹಾಸಿಕ ಪರಂಪರೆ ಇದೆ. ಮಠಾಧಿಪತಿಗಳು ಯಾವತ್ತೂ ಬೀದಿಗೆ ಬಂದಿಲ್ಲ. ಯಡಿಯೂರಪ್ಪ ಆಡಳಿತದಲ್ಲಿ ಮಠಗಳನ್ನ ಅಪವಿತ್ರ ಮಾಡಿದ್ದಾರೆ. ವೀರಶೈವ ತತ್ವ ಸಿದ್ದಾಂತ ಇಡೀ ಸಮಾಜಕ್ಕೆ ದಾರಿದೀಪ. ಮಠಗಳನ್ನು ಯಡಿಯೂರಪ್ಪ ಕತ್ತಲೆಯಲ್ಲಿ ಇಡುತ್ತಿದ್ದಾರೆ. ಹಿಂದಿನ ಮುಖ್ಯಮಂತ್ರಿಗಳು ಯಾವತ್ತೂ ಮಠಗಳನ್ನು ಸೇರಿಸಿಕೊಳ್ಳಲಿಲ್ಲ. ಆದರೆ ಯಡಿಯೂರಪ್ಪ ಅಧಿಕಾರಕ್ಕೆ ಬಂದಿದ್ದು, ಆಡಳಿತ ನಡೆಸುತ್ತಿರುವುದು ಎಲ್ಲವೂ ಅಪವಿತ್ರ. ಕೇಂದ್ರದ ಮೇಲೆ ಯಡಿಯೂರಪ್ಪ ಬೆದರಿಕೆ ಹಾಕುತ್ತಿದ್ದಾರೆ. ಮಠಾಧಿಪತಿಗಳು ದಯಮಾಡಿ ಇದರಲ್ಲಿ ಕೈ ಹಾಕಬೇಡಿ‌. ಕೆಲ ಶ್ರೀಮಂತ ಮಠಗಳು ಮಾತ್ರ ಯಡಿಯೂರಪ್ಪ ಜೊತೆ ಬಂದಿದ್ದಾರೆ. ನಿಮ್ಮ ಶ್ರೀಮಂತ ಮಠಗಳ ಮೆಡಿಕಲ್ ಕಾಲೇಜಿನಲ್ಲಿ ಲಿಂಗಾಯತರಿಗೆ, ಬಡವರಿಗೆ ಉಚಿತ ಮೆಡಿಕಲ್ ಸೀಟ್ ಕೊಟ್ಟಿದ್ದೀರಾ ಬಹಿರಂಗಪಡಿಸಿ ಅಂತ ಮೈಸೂರಿನಲ್ಲಿ ವಾಟಾಳ್ ನಾಗರಾಜ್ ಹೇಳಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ: ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿ 6 ತಿಂಗಳೆ ಆಗಿದೆ. ಈಗಂತೂ ತುತ್ತ ತುದಿಗೆ ಬಂದಿದೆ. ಸಿಎಂ ಬದಲಾವಣೆ ಒಂದು ವರ್ಗ ಒತ್ತಾಯ ಮಾಡುತ್ತಿದೆ. ಇವರು ಸಿಎಂ ಆಗಿ ಉಳಿಬೇಕು ಅಂತ ಹೊರಾಟ ಮಾಡ್ತಾ ಇದ್ದಾನೆ. ಆದರೆ ರಾಜ್ಯದಲ್ಲಿ ಆಡಳಿತ ಕುಸಿದು ಬಿದ್ದಿದೆ. ಆಡಳಿತ ಕುಸಿದಿರುವುದರಿಂದ ಯಡಿಯೂರಪ್ಪಗೆ ಅರ್ಹತೆ ಇಲ್ಲ. ರಾಜ್ಯದ ಹಿತದೃಷ್ಟಿಯಿಂದ ಯಡಿಯೂರಪ್ಪ ರಾಜೀನಾಮೆ ನೀಡಬೇಕು ಎಂದರು.

ಬ್ಯಾಂಕಿಂಗ್ ವ್ಯವಸ್ಥೆ ಕನ್ನಡೀಕರಣಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ: ಇನ್ನು ಹಿಂದಿ ಹೇರಿಕೆ ವಿರುದ್ದ ವಾಟಾಳ್ ನಾಗರಾಜ್ ಪ್ರತಿಭಟನೆ ಮಾಡಿದ್ದಾರೆ. ಮೈಸೂರಿನ ಜಯಚಾಮಾರಾಜ ಒಡೆಯರ್ ವೃತ್ತದಲ್ಲಿ ಪ್ರತಿಭಟಿಸಿ ಕೆಜಿಎಪ್ ನಲ್ಲಿ ತಮಿಳುನಗರ ಸಭೆ ಆಗಿದೆ. ಎಲ್ಲ ವಲಯಗಳನ್ನು ಕನ್ನಡೀಕರಣಗೊಳಿಸಬೇಕು. ಬ್ಯಾಂಕ್ ನ ಎಲ್ಲಾ ವಹಿವಾಟು ಕನ್ನಡದಲ್ಲೇ ಆಗಬೇಕು. ಇಲ್ಲವಾದರೆ ಬ್ಯಾಂಕ್ ಗೆ ನುಗ್ಗಿ ಪ್ರತಿಭಟನೆ ಮಾಡಲಾಗುವುದು. ಕೆಜಿಎಪ್ ನಲ್ಲಿ ತಮಿಳು ನಾಮಫಲಕ ಹಾಗೂ ತಮಿಳರ ಆಡಳಿರ ವಿರುದ್ದ ಜುಲೈ 26 ರಂದು ಕೆಜಿಎಫ್ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.

About Author

Leave a Reply

Your email address will not be published. Required fields are marked *