ನಿರ್ಬಂಧ ಇದ್ರೂ ಅನಗತ್ಯ ಓಡಾಟ: ಪೊಲೀಸರೊಡನೆ ಕಿತ್ತಾಟಕ್ಕೆ ಇಳಿದ ಯುವತಿ
1 min readಮೈಸೂರು: ಕುಂಟು ನೆಪಹೊಡ್ಡಿ ರಸ್ತೆಯಲ್ಲಿ ಸಂಚರಿಸುತಿದ್ದ ಯುವತಿ ಪೊಲೀಸರೊಡನೆ ಕಿತ್ತಾಟಕ್ಕೆ ಇಳಿದ ಘಟನೆ ಮೈಸೂರಿನಲ್ಲಿ ನಡೆದಿದೆ. ವಾಹನ ತಪಾಸಣೆ ವೇಳೆ ಪೊಲೀಸರಿಗೆ ತಗ್ಲಾಕೊಂಡ ಯುವತಿ ಮಹಿಳಾ ಪೊಲೀಸರು ಎಷ್ಟೇ ಶಾಂತವಾಗಿ ವರ್ತಿಸಿದರೂ ರಂಪಾಟ ನಿಲ್ಲಿಸಲಿಲ್ಲ.
ಬೆಳಿಗ್ಗೆ 10 ಗಂಟೆಯ ನಂತರ ವಾಹನ ಸಂಚಾರಕ್ಕೆ ನಿರ್ಬಂಧ ಇದ್ರೂ ಹೆಗ್ಗಿಲ್ಲದೆ ವಾಹನ ಸಂಚಾರ ನಡೆಯುತ್ತಿತ್ತು. ಈಗಾಗಿ ಮೈಸೂರಿನ ವಾಲ್ಮೀಕಿ ರಸ್ತೆಯಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಕಿರಿಕ್ ನಡೆದಿದ್ದು ಬೈಕ್ ನಲ್ಲಿ ನಾಯಿ ಜೊತೆ ಬಂದಿದ್ದ ಯುವತಿ ವಾಹನ ತಪಾಸಣೆ ಕಾರ್ಯಕ್ಕೂ ಅಡ್ಡಿ ಪಡಿಸಿ ರಂಪಾಟ ನಡೆಸಿದ್ದಾಳೆ. ಅಲ್ಲದೆ ಯುವಕರು ನಾಚುವಂತೆ ಪೊಲೀಸರಿಂದ ಎಸ್ಕೇಪ್ ಆಗಲು ಯತ್ನ ನಡೆಸಿದ್ದಾಳೆ. ಯುವತಿಯ ರಂಪಾಟಕ್ಕೆ ದಿಕ್ಕು ತೋಚದಂತಾದ ಪೊಲೀಸರು. ಮೈಸೂರಿನ ವಿವಿ ಪುರಂ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.