ಮನೆಯಲ್ಲೇ ಕುಳಿತು ನಾಗರಹೊಳೆಯ ಕಾಡಿನ ಅನುಭವ ಪಡೆಯಿರಿ!
1 min read
ಮೈಸೂರು: ಲಾಕ್ ಡೌನ್ ನಿಂದ ಕಾಡನ್ನು ಮಿಸ್ ಮಾಡಿಕೊಂಡವರಿಗೆ ಲಾಕ್ ಡೌನ್ ನಲ್ಲಿ ನಾಗರಹೊಳೆ ಅರಣ್ಯ ಹೇಗಿದೆ ಎಂಬುದನ್ನು ತೋರಿಸಲು ವಿನೂತನ ಪ್ರಯತ್ನ ನಡೆದಿದೆ. ಮನೆಯಲ್ಲೇ ಕುಳಿತು ನೀವು ಕಾಡಿನ ಅನುಭವ ಪಡೆಯಬಹುದು.
ಹೌದು. ಯೂಟ್ಯೂಬ್ ವಿಡಿಯೋ ಮೂಲಕ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಕಾಡನ್ನು ತೋರಿಸುವ ಪ್ರಯತ್ನ ಅರಣ್ಯಾಧಿಕಾರಿಗಳಿಂದ ನಡೆದಿದೆ. ಸದ್ಯ ಲಾಕ್ ಡೌನ್ ನಲ್ಲಿ ಕಾಡು ಹೇಗಿದೆ ಎಂಬುದನ್ನು ಡ್ರೋನ್ ಮೂಲಕ ತೋರಿಸಿರುವ ಇಲಾಖೆ, ಸಫಾರಿ ಮಿಸ್ ಮಾಡಿಕೊಂಡವರಿಗೆ ಅದ್ಭುತವಾದ ವೀಡಿಯೋ ತಯಾರಿಸಿ ಬಿಡುಗಡೆ ಮಾಡಿದೆ.

ವಿಡಿಯೋದಲ್ಲಿ ಅಚ್ಚ ಹಸಿರಿನಿಂದ ಕೂಡಿರುವ ನಾಗರಹೊಳೆ ಕಾಡು, ವನ್ಯಪ್ರಾಣಿಗಳ ದರ್ಶನವಾಗಿದೆ. ಸದ್ಯ ಅರಣ್ಯ ಇಲಾಖೆ ಕೆಲಸಕ್ಕೆ ಜನರಿಂದ ಶ್ಲಾಘನೆ ವ್ಯಕ್ತವಾಗಿದೆ.