ಕೊರೊನಾದಿಂದ ಸಾವನ್ನಪ್ಪಿದ ಮನೆಗಳಿಗೆ ತೆರಳಿ ಸಾಂತ್ವನ ಹೇಳಿದ ಶಾಸಕ ರಾಮದಾಸ್

1 min read

ಮೈಸೂರು: ಶಾಸಕ ಎಸ್.ಎ ರಾಮದಾಸ್ ರವರ ನೇತೃತ್ವದಲ್ಲಿ ಕೃಷ್ಣರಾಜ ಕ್ಷೇತ್ರದಲ್ಲಿ ಕೋವೀಡ್ ಮಹಾಮಾರಿಯಿಂದ‌ ಮೃತಪಟ್ಟಂತ ಕುಟುಂಬದ ಮನೆಗೆ ಭೇಟಿ ನೀಡಿ ಅವರಿಗೆ ಸಾಂತ್ವನ ಹೇಳಿ ಅಂತಹ ಕುಟುಂಬಕ್ಕೆ ಕೇಂದ್ರ ಹಾಗೂ ರಾಜ್ಯಸರ್ಕಾರ ಮತ್ತು ನಗರಪಾಲಿಕೆಯ ವಿವಿಧ ಯೋಜನೆಯನ್ನು ಕೊಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಕೆ.ಆರ್ ಕ್ಷೇತ್ರದ ಜೆಸಿನಗರ ,ರಾಮಾನುಜ ರಸ್ತೆ, ಬೆಸ್ತರಗೇರಿ,ಕನಕಗಿರಿ , ಜಯನಗರ , ಚಿನ್ನಗಿರಿ ಕೊಪ್ಪಲ್ ನಲ್ಲಿ ಕೋವಿಡ್ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ ಮನೆಗಳಿಗೆ ಭೇಟಿ ನೀಡಿ ಸಾಂತ್ವಾನ ಹೇಳಿ ಸರ್ಕಾರದ ಪಿಂಚಣಿ ಯೋಜನೆ, ನಗರಪಾಲಿಕೆಯ ವಿವಿಧ ಯೋಜನೆಯನ್ನು ಕೊಡಿಸುವ ಕಾರ್ಯಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ರಾಮದಾಸ್ ಕೋವಿಡ್ ನಿಂದ ಸಾವಿನ್ನಪ್ಪಿರುವವರ ಕುಟುಂಬದ ಪಟ್ಟಿಯನ್ನ ಮಾಡಿ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುವ ಕೆಲಸ ಮಾಡುತ್ತಿದ್ದೇವೆ. ಅವರಿಗೆ ಮೊದಲನೆಯದಾಗಿ ಡೆತ್ ಸರ್ಟಿಫಿಕೇಟ್ ಮನೆಗೆ ತಲುಪಿಸುವ ಕೆಲಸದ ಜೊತೆಗೆ ಸಾಮಾಜಿಕ ಭದ್ರತೆ, ವಿಧವಾ ಪಿಂಚಣಿ ಹಾಗೂ ಸಂಸ್ಕಾರದ ಹಣ ಹೀಗೆ ಸರ್ಕಾರದ ಸೌಲತ್ತುಗಳ ಜೊತೆ ನಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದೇವೆ ಇದಾದ ನಂತರದಲ್ಲಿ ನಮ್ಮ ನಗರಪಾಲಿಕಾ ಸದಸ್ಯರು ಹಾಗೂ ಕಾರ್ಯಕರ್ತರು ಕ್ಷೇತ್ರದ ಎಲ್ಲಾ ಮನೆಗಳಿಗೂ ತೆರಳಿ ಸಾಂತ್ವನ ಹೇಳಿ ಕೈಲಾದ ಸಹಾಯ ಮಾಡಲಿದ್ದಾರೆ ಎಂದರು.

ಸದರಿ ಕಾರ್ಯಕ್ರಮದಲ್ಲಿ ನಗರಪಾಲಿಕಾ ಸದಸ್ಯರಾದ ಬಿ.ವಿ ಮಂಜುನಾಥ್, ಛಾಯಾದೇವಿ, ಗೀತಾಶ್ರೀ ಯೋಗಾನಂದ್, ಬಿಜೆಪಿ ಕೆ.ಆರ್ ಕ್ಷೇತ್ರದ ಉಪಾಧ್ಯಕ್ಷರಾದ ಎಂ.ಆರ್.ಬಾಲಕೃಷ್ಣ, ಬಿಜೆಪಿ ಪ್ರಮುಖರಾದ ಯೋಗಾನಂದ್, ಹರೀಶ್, ನವೀನ್, ಸಂತೋಷ್, ವೆಂಕಟೇಶ್, ಶುಭಾಶ್, ಗುರು, ಸಂತೋಷ್, ಪುರುಷೋತ್ತಮ , ವೆಂಕಟೇಶ್, ಪ್ರದೀಪ್, ನಾಗರಾಜ್, ಅಂಗಡಿ ಸೋಮಣ್ಣ, ಚಿನ್ಮಯ್, ಲೋಕೇಶ್ , ಆಶಾ ಕಾರ್ಯಕರ್ತೆಯರು, ಪೊಲೀಸ್ ಸಿಬ್ಬಂದಿಗಳು ಹಾಗೂ ಇನ್ನೂ ಮುಂತಾದವರು ಹಾಜರಿದ್ದರು.

About Author

Leave a Reply

Your email address will not be published. Required fields are marked *