ಇಂದು ಟೋಕಿಯೋ ಒಲಂಪಿಕ್ಸ್ಗೆ ಚಾಲನೆ- ಭಾರತದಿಂದ 127 ಕ್ರೀಡಾಪಟುಗಳು ಭಾಗಿ!
1 min readಇಡೀ ವಿಶ್ವವೇ ಕಾತುರತೆಯಿಂದ ಕಾಯುತ್ತಿರುವ ಒಲಂಪಿಕ್ಸ್ ಹಬ್ಬಕ್ಕೆ ಇಂದು ಸಂಜೆ ನಾಲ್ಕೂವರೆ ಗಂಟೆಗೆ ಚಾಲನೆ ಸಿಗಲಿದ್ದು ಭಾರತದಿಂದ 127 ಕ್ರೀಡಾಪಟುಗಳು ಭಾಗಿಯಾಗುತ್ತಿದ್ದಾರೆ. ಈಗಾಗಲೇ ಭಾರತದಿಂದ ಈ ಎಲ್ಲಾ ಕ್ರೀಡಾಪಟುಗಳಿಗೆ ಆಲ್ ದಿ ಬೆಸ್ಟ್ ಹೇಳಿದ್ದು ಪ್ರತಿಯೊಬ್ಬರಿಗು ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.
ಈ ನಡುವೆ ಟೋಕಿಯೋದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದ್ದರು ಸಹ ಕ್ರೀಡಾಪಟುಗಳನ್ನ ನೇರವಾಗಿ ಕಣ್ತುಂಬಿಕೊಳ್ಳಲು ಅವರ ಆಟವನ್ನ ಆನಂದಿಸಲು ಅವಕಾಶ ನೀಡಿಲ್ಲ. ಕಾರಣ ಕರೋನಾದಿಂದ ಕೇವಲ ಒಂದು ಸಾವಿರ ಮಂದಿ ಗಣ್ಯರಿಗೆ ಮಾತ್ರ ಸ್ಟೇಡಿಯಂನಲ್ಲಿ ಕುಳಿತು ನೋಡುವ ಅವಕಾಶ ನೀಡಲಾಗಿದೆ.
ಇದರ ಬೆನ್ನಲ್ಲೇ ಟೋಕಿಯೋದಲ್ಲಿ ಇಂದು ಸಂಜೆ ವಿಶೇಷ ಕಾರ್ಯಕ್ರಮದ ಮೂಲಕ 2020-21ರ ಟೋಕಿಯೋ ಒಲಂಪಿಕ್ಸ್ಗೆ ಚಾಲನೆ ಸಿಗಲಿದ್ದು ಭಾರತದ 10 ಮಂದಿ ಮಾತ್ರ ಒಲಂಪಿಕ್ಸ್ ಪರೇಡ್ನಲ್ಲಿ ಭಾಗಿಯಾಗಲಿದ್ದಾರೆ. ಕರೋನಾದ ಕಾರಣದಿಂದ ಸಮಸ್ಯೆ ಆಗಬಾರದೆಂದು ಈ ಕ್ರಮ ಕೈಗೊಂಡಿದ್ದು ಭಾರತದಿಂದ ಮೇರಿಕೋಮ್ ಧ್ವಜ ಹಿಡಿದು ಸಾಗುತ್ತಿರೋದು ವಿಶೇಷವಾಗಿದೆ.
ಇನ್ನು ಆತಿಥೆಯಾ ಜಪಾನ್ ಈ ಬಾರಿ ಅತೀ ಹೆಚ್ಚು ಕ್ರೀಡಾಪಟುಗಳನ್ನ ಕಣಕ್ಕೆ ಇಳಿಸುತ್ತಿದ್ದು ಬರೋಬ್ಬರಿ 527 ಮಂದಿ ಕ್ರೀಡಾಪಟುಗಳು ಈ ಬಾರಿ ಒಲಂಪಿಕ್ಸ್ ನಲ್ಲಿ ಭಾಗಿಯಾಗುತ್ತಿದ್ದಾರೆ. ಇನ್ನು ಇಡೀ ಒಲಂಪಿಕ್ಸ್ ನಲ್ಲಿ ಬರೋಬ್ಬರಿ 195 ದೇಶಗಳು, 11 ಸಾವಿರ ಕ್ರೀಡಾಪಟುಗಳು ಹಾಗೂ 30ಕ್ಕು ಹೆಚ್ಚು ಕ್ರೀಡೆಯಲ್ಲಿ ಭಾಗಿಯಾಗುತ್ತಿದ್ದಾರೆ. ಹಾಗಾಗಿ ಎಲ್ಲರ ಚಿತ್ತ ಟೋಕಿಯೋದ ಒಲಂಪಿಕ್ಸ್ನತ್ತ ನೆಟ್ಟಿದೆ.
ನಮ್ಮ ಇಂಡಿಯಾದ ಕಲಿಗಳು ಸಹ ಚಿನ್ನದ ಬೇಟೆಯಾಡಿ ತಾಯ್ನಾಡಿಗೆ ಕೀರ್ತಿ ತರಲಿ ಎಂದು ಆಶಿಸೋಣ. ಆಲ್ ದಿ ಬೆಸ್ಟ್ ಇಂಡಿಯಾ….
ಟೀಂ ನನ್ನೂರು ಮೈಸೂರು-