ಟಿಪ್ಪು ಎಕ್ಸ್‌ಪ್ರೆಸ್‌ ರೈಲಿಗೆ ಒಡೆಯರ್ ಹೆಸರಿಗೆ ಯದುವೀರ್ ಸ್ವಾಗತ!

1 min read

ಮೈಸೂರು – ಬೆಂಗಳೂರು ನಡುವಿನ ಸಂಚಾರದ ಟಿಪ್ಪು ಎಕ್ಸ್‌ಪ್ರೆಸ್ ರೈಲಿಗೆ ಒಡೆಯರ್ ಹೆಸರಿಡಬೇಕೆಂಬ ಪ್ರತಾಪ್‌ ಸಿಂಹ ಸಲಹೆಗೆ ಮೈಸೂರು ಯದುವಂಶದ ಮಹಾರಾಜ ಶ್ರೀ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸ್ವಾಗತಿಸಿದ್ದಾರೆ. ಮೈಸೂರಿನಲ್ಲಿ ಈ ಬಗ್ಗೆ ಮಾತನಾಡಿದ ಯದುವೀರ್ ಒಡೆಯರ್, ರೈಲ್ವೆ ಕ್ಷೇತ್ರಕ್ಕೆ ಚಾಮರಾಜ ಒಡೆಯರ್ ಕೊಡುಗೆ ಅಪಾರವಾಗಿದ್ದು ಟಿಪ್ಪು ಎಕ್ಸ್‌ಪ್ರೆಸ್‌‌ಗೆ ಚಾಮರಾಜ ಒಡೆಯರ್ ಹೆಸರು ಮರು ನಾಮಕರಣ ಪ್ರಸ್ತಾಪವಾಗಿರುವುದೇ ಸಂತಸ. ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡರು ನಮ್ಮ ಸಮ್ಮತಿ ಇದೆ ಎಂದರು. ಇನ್ನು ಅವರ ಕಾರ್ಯವನ್ನು ಮೆಚ್ಚಿ ಸಂಸದರು ಅವರ ಅಭಿಪ್ರಾಯ ಹೇಳಿದ್ದಾರೆ. ಆದರೆ ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತೆ ನೋಡೋಣ ಎಂದರು. ಇನ್ನು ಈಗಾಗಲೇ ಟಿಪ್ಪು ಎಕ್ಸ್‌ಪ್ರೆಸ್‌ ಹೆಸರು ಬದಲಾವಣೆಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದು, ಸಂಸದ ಪ್ರತಾಪ್ ಸಿಂಹ ಮಾತ್ರ ಒಡೆಯರ್ ಅವರ ಹೆಸರಿನ ಮನವಿಯನ್ನ ಈಗಾಗಲೇ ಸಲ್ಲಿಕೆ ಮಾಡಿದ್ದಾರೆ. ಅಲ್ಲದೆ ಒಡೆಯರ್ ಅವರ ಕೊಡುಗೆ ಎಂತಹದು ಎಂದು ಎಲ್ಲರಿಗು ಪರಿಚಯಿಸುವ ಕಾರಣದಿಂದ ಅವರ ಹೆಸರು ನಾಮಕರಣ ಅತ್ಯವಶ್ಯಕವಾಗಿದ್ದು ಇದಕ್ಕಾಗಿ ಸಂಸದ ಪ್ರತಾಪ್‌ ಸಿಂಹ ಅವರು ರೈಲ್ವೆ ಇಲಾಖೆಯ ಸಚಿವರಿಗು ಮನವಿಯನ್ನು ಮಾಡಿದ್ದಾರೆ.

ಹಿಜಾಬ್ ವಿವಾದದ ಬಗ್ಗೆ ಯದುವೀರ್ ಮಾತು!

ಇನ್ನು ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್ ವಿವಾದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಯದುವೀರ್ ಒಡೆಯರ್, ಹಿಜಾಬ್ ವಿಚಾರದಲ್ಲಿ ಸರ್ಕಾರದ ನಿರ್ಧಾರಕ್ಕೆ ಎಲ್ಲರೂ ಬದ್ದರಾಗಿರಬೇಕು. ಈಗಾಗಲೇ ಈ ಪ್ರಕರಣ ನ್ಯಾಯಾಲಯದಲ್ಲಿದೆ. ನ್ಯಾಯಾಲಯ ಹಾಗೂ ಸರ್ಕಾರದ ನಿರ್ಧಾರಕ್ಕೆ ಎಲ್ಲರೂ ಕಠಿಬದ್ದರಾಗಿರಬೇಕು. ಅದು ಬಿಟ್ಟು ಇದರಲ್ಲಿ ನನ್ನ ವೈಯಕ್ತಿಕ ಅಭಿಪ್ರಾಯ ಇಲ್ಲ ಎಂದರು.

About Author

Leave a Reply

Your email address will not be published. Required fields are marked *