ಕಬಿನಿ ಹಿನ್ನೀರಿನ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಮಾಡಿದ ಹುಲಿ!

1 min read

ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಬಿನಿ ಹಿನ್ನೀರಿನ ಪ್ರದೇಶದ ರಸ್ತೆಯಲ್ಲಿ ಹುಲಿ ಕಾಣಿಸಿಕೊಂಡ ಹಿನ್ನಲೆ ಕೆಲ ಕಾಲ ವಾಹನ ಸವಾರರು ನಿಲ್ಲಬೇಕಾಯಿತು.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಂತೆ ಇರುವ ಮಾನಂದವಾಡಿ ರಸ್ತೆಯಲ್ಲಿ ಹುಲಿ ಕಾಡಿನಿಂದ ಆಚೆ ಬಂದಿತ್ತು. ಕೆಲವೊತ್ತು ಹುಲಿರಾಯ ರಸ್ತೆಯಲ್ಲಿ ನಿಂತಿದ್ದ. ರಸ್ತೆಯಲ್ಲಿ ಹುಲಿ ನಿಂತ ದೃಶ್ಯವನ್ನ ವಾಹನ ಸವಾರರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಹುಲಿ ಮತ್ತೆ ಕಾಡಿಗೆ ಹೋದ ನಂತರ ಸವಾರರು ನಿರರ್ಗಳವಾಗಿ ತೆರಳಿದ್ದಾರೆ.

About Author

Leave a Reply

Your email address will not be published. Required fields are marked *