ಚರಂಡಿಯಲ್ಲಿ ವಾಸವಿದ್ದ ವ್ಯಕ್ತಿಯನ್ನು ಆಶ್ರಮಕ್ಕೆ ಸೇರಿಸಿದ ಪೊಲೀಸರು: ಮಾನವೀಯ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ

1 min read

ಮೈಸೂರು,ಅ.10-ಚರಂಡಿಯಲ್ಲಿ ವಾಸವಿದ್ದ ವ್ಯಕ್ತಿಯನ್ನು ಆಶ್ರಮಕ್ಕೆ ಸೇರಿಸುವ ಮೂಲಕ ನಗರ ಪೊಲೀಸರು ಮಾನವೀಯತೆ ಮೆರೆದಿದ್ದಾರೆ. ಇವರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೃಷ್ಣಪ್ಪ

ನಗರದ ಚರಕ ಆಸ್ಪತ್ರೆಯ ಎದುರಿನ ಪಾರ್ಕ್ ನ ಚರಂಡಿ ಬಳಿ ಕಳೆದ 6 ತಿಂಗಳಿಂದ ವಾಸಿಸುತ್ತಿದ್ದ ವ್ಯಕ್ತಿ ಬಗ್ಗೆ ನಗರ  ಪೊಲೀಸ್ ಆಯುಕ್ತರಿಗೆ ಮಾಹಿತಿ ಲಭಿಸಿದ್ದು,ಅವರ ಸೂಚನೆ ಮೇರೆಗೆ ವಿವಿಪುರಂ ಪೊಲೀಸ್ ಠಾಣೆ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಸ್ಥಳಕ್ಕೆ ತೆರಳಿ ಆ ವ್ಯಕ್ತಿ  ಪೂರ್ವಾಪರ ವಿಚಾರಿಸಿದರು. ಈ ವೇಳೆ ಅವರು ಕೃಷ್ಣಪ್ಪ ಎಂಬುದು ತಿಳಿದುಬಂದಿದೆ.

ಕೃಷ್ಣಪ್ಪ ಅವರಿಗೆ 60 ವರ್ಷವಾಗಿದ್ದು, ಕುಂಬಾರ ಕೊಪ್ಪಲು ನಿವಾಸಿ. ಆದರೆ ಅವರು ಚರಂಡಿಯಲ್ಲಿ ವಾಸಿಸುತ್ತಿದ್ದರು. ಇವರಿಗೆ ಬಟ್ಟೆ ನೀಡಿ ಬೃಂದಾವನ ಬಡಾವಣೆಯಲ್ಲಿ ಬಾಪೂಜಿ ಆನಂದ ಆಶ್ರಮದ ನಿಲಯ ಪಾಲಕರಾದ  ನಂದ ಪ್ರಸಾದ್ ರ ಸಹಾಯದಿಂದ ಆಶ್ರಮಕ್ಕೆ ದಾಖಲು ಮಾಡಲಾಗಿದೆ. ಪೊಲೀಸರ ಈ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

About Author

Leave a Reply

Your email address will not be published. Required fields are marked *