ಕೆಆರ್ಎಸ್ ಡ್ಯಾಂ ಪಕ್ಕದ ರಸ್ತೆಯ ಬ್ರಿಡ್ಜ್ ಬಿರುಕು: ಬಾರೀ ಮಳೆಯಿಂದಾಗಿ ಬ್ರಿಡ್ಜ್ ಕೆಳಭಾಗ ಕುಸಿತ
1 min readಮಂಡ್ಯ: ಕೆಆರ್ಎಸ್ ಡ್ಯಾಂ ಪಕ್ಕದ ರಸ್ತೆಯ ಬ್ರಿಡ್ಜ್ ಬಿರುಕು ಬಿಟ್ಟಿದೆ. ಬಾರೀ ಮಳೆಯಿಂದಾಗಿ ಬ್ರಿಡ್ಜ್ ಕೆಳಭಾಗ ಕುಸಿತಗೊಂಡಿದೆ. ಡ್ಯಾಂಗೆ ಹೊಂದಿಕೊಂಡಂತೆ ಇರುವ ರಸ್ತೆಯ ಪಕ್ಕದಲ್ಲಿ ಘಟನೆ.
ಘಟನೆಯಿಂದಾಗಿ ಸಾಕಷ್ಟು ಆತಂಕ ಮೂಡಿಸಿದೆ. ಸತತ ಮಳೆಯಿಂದಾಗಿ ಘಟನೆ ನಡೆದಿದೆ ಎನ್ನಲಾಗಿದೆ. ಗಣಿಕಾರಿಕೆಯಿಂದ ಈ ಘಟನೆ ಆಗಿದೆ ಎಂದು ಕೆಲವರ ವಾದಿಸುತ್ತಿದ್ದಾರೆ. ಸದ್ಯ ಡ್ಯಾಂನ ಆಸುಪಾಸಿನಲ್ಲಿ ಓಡಾಡಲು ಸ್ಥಳಿಯರು ಆತಂಕಪಡ್ತಿದ್ದಾರೆ.
ಡ್ಯಾಂ ಪಕ್ಕದ ರಸ್ತೆಯ ಬ್ರಿಡ್ಜ್ ತಳಭಾಗ ಬಿರುಕು ಹಿನ್ನಲೆ ಘಟನಾ ಸ್ಥಳಕ್ಕೆ ಶಾಸಕ ರವೀಂದ್ರ ಶ್ರೀಕಂಠಯ್ಯ ಮತ್ತು ಅಧಿಕಾರಿಗಳು ಭೇಟಿ ನೀಡಿದ್ದಾರೆ. ಡ್ಯಾಂಗೆ ಯಾವುದೇ ತೊಂದರೆ ಆಗಿಲ್ಲ. ಡ್ಯಾಂ ಪಕ್ಕದ ರಸ್ತೆಯ ಬ್ರಿಡ್ಜ್ ತಳಭಾಗ ಸ್ವಲ್ಪ ಬಿರುಕು ಬಿಟ್ಟಿದೆ. ಇದರಿಂದ ಡ್ಯಾಂಗೆ ಯಾವುದೇ ಸಮಸ್ಯೆ ಇಲ್ಲ ಅಂತ ಘಟನೆ ವೀಕ್ಷಿಸಿದ ಬಳಿಕ ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿಕೆ ನೀಡಿದ್ದಾರೆ.