ಇಂದು SSLC ಪರೀಕ್ಷೆ- ಆಲ್ ದಿ ಬೆಸ್ಟ್ ವಿದ್ಯಾರ್ಥಿಗಳೇ!!

1 min read

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೇವಲ ಎರಡೇ‌ ದಿನ ಎಸ್‌ಎಸ್‌ಎಲ್‌ಸಿ ಎಕ್ಸಾಂ‌ ನಡೆಯುತ್ತಿದ್ದು, ರಾಜ್ಯವ್ಯಾಪಿ ಸಕಲ ಸಿದ್ದತೆ ಆಗಿದೆ. ಈಗಾಗಲೇ ಶಿಕ್ಷಣ ಇಲಾಖೆಯಿಂದಲು ಕೋವಿಡ್ ನಿಯಮದ ಬಗ್ಗೆ ಹೆಚ್ಚು ನಿಗಾ ವಹಿಸಿದ್ದು ಯಾವುದೇ ರೀತಿ ಸಮಸ್ಯೆ ಆಗದಂತೆ ಕ್ರಮ ವಹಿಸಲಾಗಿದೆ. ಇಂದು ಬೆಳಗ್ಗೆ 10.30 ರಿಂದ 1.30ರ ವರೆಗು ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕೇಂದ್ರಕ್ಕೆ ಆಗಮಿಸು ಮಕ್ಕಳಿಗೆ ಶಾಲೆ ಹೊರಗೆ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸರ್ ನೀಡಿ ಸಾಮಾಜಿಕ ಅಂತರದೊಂದಿಗೆ ಪರೀಕ್ಷೆ ಬರೆಸಲಾಗುತ್ತಿದೆ. ವಿಶೇಷ ಅಂದ್ರೆ ಈ ಬಾರಿ ಎರಡು ದಿನದಲ್ಲಿ ಪರೀಕ್ಷೆ ಮುಗಿಯಲಿದೆ.

120 ಅಂಕಗಳ ಮೂಲಕ ಒಂದೊಂದು ವಿಷಯಕ್ಕು 40 ಅಂಕ ನಿಗಧಿ ಮಾಡಲಾಗಿದೆ. ಮೂರು ಗಂಟೆಗಳ ಸಮಯ ನಿಗಧಿ ಮಾಡಿದ್ದು ಎಲ್ಲ ಪ್ರಶ್ನೆಗಳಿಗು ಉತ್ತರ ಬರೆಯುವಂತಿಲ್ಲ. ಕೇವಲ ಟಿಕ್ ಮಾರ್ಕ್ ಮಾಡಿ ಉತ್ತರ ಆಯ್ಕೆ ಮಾಡಬೇಕಿದೆ.

ಇನ್ನು ರಾಜ್ಯಾವ್ಯಾಪಿ ಬರೋಬ್ಬರಿ 8 ಲಕ್ಷಕ್ಕು ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುತ್ತಿದ್ದು, 74 ಸಾವಿರ ಪರೀಕ್ಷಾ ಕೇಂದ್ರ‌‌ ನಿಗಧಿ ಮಾಡಲಾಗಿದೆ. ಒಂದು ಪರೀಕ್ಷಾ ಕೊಠಡಿಯಲ್ಲಿ ಕೇವಲ 12 ಮಂದಿಗೆ ಮಾತ್ರ ಅವಕಾಶ ಕಲ್ಪಿಸುತ್ತಿದ್ದು, ನೆಗಡಿ, ಕೆಮ್ಮಿನ ಸಮಸ್ಯೆ ಇದ್ದರೆ ಅಂತಹ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ವಿದ್ಯಾರ್ಥಿಗಳ ಜೀವನದ ಟರ್ನಿಂಗ್ ಪಾಯಿಂಟ್ ಆಗಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಯಶಸ್ವಿಯಾಗಿ ಮಾಡಲು ನಿರ್ಧಾರ ಮಾಡಲಾಗಿದೆ.

ಸರ್ಕಾರದ ಈ ನಿಯಮ ಯೋಚನೆ ಸದ್ಯಕ್ಕೆ ಎಲ್ಲರಿಗು ಬೇಡ ಅನಿಸಿದರು, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಇದು ಒಳ್ಳೆಯದ್ದೆ ಅನಿಸಿದೆ. ಎಲ್ಲ ವಿದ್ಯಾರ್ಥಿಗಳು ಪರೀಕ್ಷೆಯನ್ನ ತಾಳ್ಮೆಯಿಂದ ಭಯ ಬಿಟ್ಟು, ಯಶಸ್ವಿಯಾಗಿ ನಿಭಾಯಿಸಲಿ. ಎಲ್ಲರು ಕ್ಷೇಮವಾಗಿ ಪರೀಕ್ಷಾ ಕೊಠಡಿಯಿಂದ ಹೊರಬರಲಿ ಅನ್ನೋದಷ್ಟೇ ನಮ್ಮ ಆಶಯ. ಆಲ್ ದಿ ವೆರಿ ಬೆಸ್ಟ್ ವಿದ್ಯಾರ್ಥಿಗಳೇ…

About Author

Leave a Reply

Your email address will not be published. Required fields are marked *