ಮೈಸೂರಲ್ಲಿ ಟೆಂಡರ್ ಮತದಾನ…!
1 min read
ಮೈಸೂರಲ್ಲಿ ಟೆಂಡರ್ ಮತದಾನ…!
ಮೈಸೂರು: ಮೈಸೂರಿನ ಪೀಪಲ್ಸ್ ಪಾರ್ಕ್ ಕಾಲೇಜು ಆವರಣದ ಮತಗಟ್ಟೆಯಲ್ಲಿ ಟೆಂಡರ್ ಮತದಾನ ನಡೆಯುತ್ತಿದೆ. ರಮೇಶ್ ಎಂಬ ಮತದಾರರು ಪೀಪಲ್ ಪಾರ್ಕ್ ನಲ್ಲಿ ಮತದಾನ ಮಾಡಲು ಆಗಮಿಸಿದ್ದ ವೇಳೆ ನಿಮ್ಮ ಮತ ಚೀಟಿ ಎದುರು ಮತ್ತೊಬ್ಬರು ಮತ ಹಾಕಿದ್ದಾರೆಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. ಆದರೆ, ನಾನಿನ್ನೂ ಮತ ಹಾಕಿಲ್ಲ ಎಂದು ದಾಖಲೆ ಒದಗಿಸಿದಾಗ ರಮೇಶ್ ಅವರಿಂದ ಟೆಂಡರ್ ಮತ ಪತ್ರಕ್ಕೆ ಸಹಿ ಮಾಡಿಸಿಕೊಂಡು ಅವರಿಂದ ಮತದಾನ ಮಾಡಿಸಿದ್ದಾರೆ. ಆದರೆ, ಬೆರಳಿಗೆ ಶಾಹಿಯನ್ನೇ ಹಾಕದೇ ಕಳುಹಿಸಿದ್ದಾರೆ. ಇದನ್ನ ನೋಡಿದ್ರೆ ಪದವೀಧರ ಚುನಾವಣೆಯಲ್ಲು ಅಕ್ರಮ ನಡೆಯುತ್ತಿದ್ಯ ಎಂಬ ಪ್ರಶ್ನೆ ಮೂಡಿದೆ.
