ಮಕ್ಕಳಂತೆ ಗಳಗಳನೇ ಅತ್ತ ಸಿಎಂ ಬೊಮ್ಮಾಯಿ!
1 min read
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿನ್ನೆ ರಾತ್ರಿ ಬೆಂಗಳೂರಿನ ಓರಿಯನ್ ಮಾಲ್ ನಲ್ಲಿ ಚಾರ್ಲಿ 777 ಚಲನಚಿತ್ರ ವೀಕ್ಷಿಸಿದರು.

ಚಲನಚಿತ್ರದಲ್ಲಿ ಬರುವ ಚಾರ್ಲಿ ಹೆಸರಿನ ನಾಯಿಯ ಪಾತ್ರವನ್ನು ವೀಕ್ಷಿಸಿ ಅವರ ಮನೆಯಲ್ಲಿದ್ದ ಸನ್ನಿ ನಾಯಿಯ ತುಂಟಾಟವನ್ನು ಮೆಲಕು ಹಾಕಿದರು.


ಚಲನಚಿತ್ರದ ಕೊನೆಯಲ್ಲಿ ಚಾರ್ಲಿ ನಾಯಿಯು ಸಾವನ್ನಪ್ಪುತ್ತದೆ. ಅತೀ ಆತ್ಮಿಯವಾಗಿದ್ದ ಸಾಕು ಪ್ರಾಣಿಯು ತಮ್ಮನ್ನು ಅಗಲುವ ಸನ್ನಿವೇಶವನ್ನು ವೀಕ್ಷಿಸಿದ ಮುಖ್ಯಮಂತ್ರಿಗಳ ಮಾತೃಹೃದಯವು ಭಾವುಕವಾಗಿ ಕಣ್ಣಿನಲ್ಲಿ ಕಂಬನಿಯನ್ನು ತರಸಿತ್ತು.

ಮುಖ್ಯಮಂತ್ರಿಗಳು ಆ ಕ್ಷಣದಲ್ಲಿ ದು:ಖವನ್ನು ತಡೆಯದೇ ಮುದ್ದು ಮಕ್ಕಳಂತೆ ಗಳಗಳನೇ ಅತ್ತುಬಿಟ್ಟರು. ಎಲ್ಲರೆದುರು ಅಳಬಾರದೆಂದು ತಮ್ಮ ಮನಸ್ಸನ್ನು ಹತೋಟಿಯಲ್ಲಿರಿಸಲು ಪ್ರಯತ್ನಿಸಿದರೂ ಸಹ ತಮ್ಮ ಮುಗ್ದ ಮನಸ್ಸು ಹಾಗೂ ಮುಗ್ದ ಭಾವನೆಗಳ ಪರಿಣಾಮ ಕಣ್ಣಿನಲ್ಲಿ ಕಂಬನಿಗಳು ತಾವಾಗಿಯೇ ಹೊರಗೆ ಬರಲು ಪ್ರಾರಂಭಿಸಿದ್ದವು.