ಟೀಂ ಇಂಡಿಯಾಗೆ ದ್ರಾವಿಡ್ ಕೋಚ್ ಆದ. ಬಳಿಕ ಭಾರೀ ಬದಲಾವಣೆ!

1 min read

ಕ್ರಿಕೆಟ್ : ಟೀಂ ಇಂಡಿಯಾ ಕೋಚ್ ಆಗಿ ಹೊಸದಾಗಿ ನೇಮಕಗೊಂಡಿರುವ ರಾಹುಲ್ ದ್ರಾವಿಡ್ ತಂಡ ಕೂಡಿಕೊಳ್ಳುವ ಮೊದಲೇ ಆಟಗಾರರಿಗಿದ್ದ ಹೈ ಟೆನ್ಷನ್ ನಿವಾರಿಸಲು ಮುಂದಾಗಿದ್ದಾರೆ.

ಇತ್ತೀಚೆಗೆ ಬಯೋ ಬಬಲ್ ವಾತಾವರಣದಿಂದಾಗಿ ಆಟಗಾರರು ಸಾಕಷ್ಟು ಮಾನಸಿಕವಾಗಿ ಬಳಲುತ್ತಿದ್ದಾರೆ. ಇದು ಪಂದ್ಯದ ಮೇಲೂ ಪರಿಣಾಮ ಬೀರುತ್ತಿದೆ. ಹೀಗಾಗಿ ಆಟಗಾರರ ಕೆಲಸದೊತ್ತಡ ಕಡಿಮೆ ಮಾಡಲು ದ್ರಾವಿಡ್ ಬಿಸಿಸಿಐ ಮುಂದೆ ಹೊಸ ಪ್ರಸ್ತಾಪವಿಟ್ಟಿದ್ದಾರೆ.

ಆಟಗಾರರ ಒತ್ತಡ ಕಡಿಮೆ ಮಾಡಲು ಕೆಲವರಿಗೆ ಆಗಾಗ ವಿಶ್ರಾಂತಿ ನೀಡಿ ರೊಟೇಷನ್ ಪದ್ಧತಿಯಲ್ಲಿ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡುವುದು. ಇದರಿಂದ ಆಟಗಾರರಿಗೆ ಆಗಾಗ ಬ್ರೇಕ್ ಸಿಗುತ್ತದೆ. ಹೊಸದಾಗಿ ಇನ್ನಷ್ಟು ಯುವ ಆಟಗಾರರಿಗೂ ಅವಕಾಶ ಸಿಕ್ಕಂತಾಗುತ್ತದೆ. ಅದರ ಪರಿಣಾಮವೇ ನ್ಯೂಜಿಲೆಂಡ್ ಸರಣಿಗೆ ಪ್ರಮುಖರಿಗೆ ವಿಶ್ರಾಂತಿ ನೀಡಿರುವುದು. ಇನ್ನು ಮುಂದಿನ ದಿನಗಳಲ್ಲಿಯೂ ಇದೇ ರೀತಿ ರೊಟೇಷನ್ ಪದ್ಧತಿ ಜಾರಿಯಲ್ಲಿರಲಿದೆ.

About Author

Leave a Reply

Your email address will not be published. Required fields are marked *