ನನ್ನ ಜೀವನ’ ನನ್ನ ಸ್ವಚ್ಛ ನಗರ ಅಭಿಯಾನ!!
1 min readಪರಿಸರ ಸಂರಕ್ಷಣೆಗೆ ಕೈ ಜೋಡಿಸಿ’ : ಮೇಯರ್ ಶಿವಕುಮಾರ್
ನನ್ನ ಜೀವನ, ನನ್ನ ಸ್ವಚ್ಛ ನಗರ ಜಾಗೃತಿ ಜಾಥಾ ಕಾರ್ಯಕ್ರಮ
ವಿದ್ಯಾರಣ್ಯಪುರಂನಲ್ಲಿ ‘ನನ್ನ ಜೀವನ, ನನ್ನ ಸ್ವಚ್ಛ ನಗರ’ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು
ಮೈಸೂರು: ‘ಪರಿಸರ ಸಂರಕ್ಷಣೆಯಲ್ಲಿ ಎಲ್ಲರೂ ಭಾಗಿಯಾಗಬೇಕು. ಸ್ವಚ್ಛ, ಸುಂದರ ನಗರವನ್ನಾಗಿಸಲು ಕೈ ಜೋಡಿಸಬೇಕು’ ಎಂದು ಮಹಾಪೌರದ ಶಿವಕುಮಾರ್ ಹೇಳಿದರು.
ಮೈಸೂರು ಮಹಾನಗರ ಪಾಲಿಕೆ ಹಾಗೂ
ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕ ಹಾಗೂ ವಿದ್ಯಾರಣ್ಯ ಟ್ರಸ್ಟ್ ಮತ್ತು ಕೆಎಂಪಿ ಕೆ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ
ಮೈಸೂರು ವಿದ್ಯಾರಣ್ಯಪುರಂ ನಲ್ಲಿರುವ ವಿದ್ಯಾರಣ್ಯ ಕೋಚಿಂಗ್ ಸೆಂಟರ್ ನಿಂದ ಪ್ರಾರಂಭಗೊಂಡ ಜಾಥಾ ಸ್ವಚ್ಛತಾ ಜಾಗೃತಿ, ಕರಪತ್ರಗಳನ್ನು ಹಿಡಿದು ನಮ್ಮ ನಗರ ಸ್ವಚ್ಛ ನಗರ, ಎಂಬ ಘೋಷವಾಕ್ಯದೊಂದಿಗೆ
ನಾರಾಯಣ ಶಾಸ್ತ್ರಿ ರಸ್ತೆಯ ಮೂಲಕ ಚಾಮುಂಡಿಪುರಂ ವೃತ್ತದಲ್ಲಿ ಜಾಥಾ ಮುಕ್ತಾಯಗೊಳಿಸಿದರು
ಜಾಥಾ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಸ್ವಚ್ಛ ಭಾರತ್ ಮಿಷನ್ ನಗರ-2.0 ಯೋಜನೆಯಡಿ ಪ್ಲಾಸ್ಟಿಕ್ ಚೀಲ ಸೇರಿದಂತೆ ಆಟಿಕೆ ವಸ್ತುಗಳು, ಬಳಸಿದ ಬಟ್ಟೆ, ದಿನಪತ್ರಿಕೆಗಳು, ಹಳೆ ಪುಸ್ತಕಗಳು ಹಾಗೂ ಎಲೆಕ್ಟ್ರಾನಿಕ್ ವಸ್ತುಗಳಂತಹ ಇತರ ನವೀಕರಿಸಿ, ಮರು ಬಳಸಬಹುದಾದ ವಸ್ತುಗಳ ಉತ್ಪಾದನೆಯನ್ನು ಕಡಿಮೆಗೊಳಿಸಲು ಮತ್ತು ಸುಸ್ಥಿರ ಜೀವನ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಪರಿಸರ ರಕ್ಷಿಸುವ ಉದ್ದೇಶದಿಂದ ನನ್ನ ಲೈಪ್, ನನ್ನ ಸ್ವಚ್ಛ ನಗರ ಕಾರ್ಯಕ್ರಮ ಆಯೋಜಿಸಲಾಗಿದೆ. ಅದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಯೋಜನೆ ಸಾಕಾರಗೊಳಿಸುವ ಅವಶ್ಯಕತೆ ಇದೆ’ ಎಂದರು.
ಈ ಮೂಲಕ ನಗರದ ಜನರು ಪರಿಸರ ಸಂರಕ್ಷಣೆಗೆ ಕೈ ಜೋಡಿಸಬೇಕು’ ಎಂದು ತಿಳಿಸಿದರು.
ಯೋಜನೆ ಬಳಕೆ ಹೇಗೆ?: ಈ ಯೋಜನೆಯಂತೆ ಜನರ ಬಳಿಯಿಂದ ಸಂಗ್ರಹಿಸಲಾಗುವ ಹಳೆ ಬಟ್ಟೆಗಳನ್ನು ಅನಾಥಾಶ್ರಮ ಸೇರಿದಂತೆ ಇನ್ನಿತರ ಅಗತ್ಯವಿರುವ ಸಂಸ್ಥೆಗಳಿಗೆ ವಿತರಿಸಲಾಗುತ್ತದೆ. ಇದೇ ರೀತಿ ಓದಿದ ಪುಸ್ತಕಗಳಿದ್ದರೆ ಅವುಗಳನ್ನು ಗ್ರಂಥಾಲಯ ಅಥವಾ ಅವಶ್ಯತೆ ಇರುವವರಿಗೆ ವಿತರಿಸಲಾಗುತ್ತದೆ. ಇದೇ ರೀತಿ ಹಳೆಯ ಆಟಿಕೆಗಳನ್ನು ಪುನರ್ವಸತಿ ಕೇಂದ್ರಗಳು ಹಾಗೂ ಮಕ್ಕಳನ್ನು ನೋಡಿಕೊಳ್ಳುವ ಸಂಘ ಸಂಸ್ಥೆಗಳಿಗೆ ನೀಡಲಾಗುತ್ತದೆ. ದಿನಪತ್ರಿಕೆಯನ್ನು ಮರು ಬಳಕೆ ಮಾಡಲು ಸಂಬಂಧಿಸಿದ ಕಂಪನಿಗೆ ತಲುಪಿಸಲಾಗುವುದು. ಮಾತ್ರವಲ್ಲದೆ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಕವರ್ ನೀಡಿದರೆ, ಬಟ್ಟೆ ಬ್ಯಾಗ್ ನೀಡಲಾಗುತ್ತದೆ ಎಂದರು.
ನಂತರ ಮಾತನಾಡಿದ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ‘ನಮ್ಮ ಮನೆಗಳಲ್ಲಿ ಬಳಸದೆ ಇರುವ ವಸ್ತುಗಳನ್ನು ಸುಖಾಸುಮ್ಮನೇ ಇಟ್ಟುಕೊಂಡಿರುತ್ತೇವೆ. ಪರಿಸರ ರಕ್ಷಿಸುವ ಉದ್ದೇಶದಿಂದ ಈ ರೀತಿಯ ವಸ್ತುಗಳನ್ನೆಲ್ಲಾ ನಗರ ಪಾಲಿಕೆ ಮರುಬಳಕೆ ಕೇಂದ್ರಕ್ಕೆ ನೀಡಬೇಕು ಎಂದು ಹೇಳಿದರು.
‘ತ್ಯಾಜ್ಯ ವಸ್ತುಗಳ ಸಮರ್ಪಕ ವಿಲೇವಾರಿ ದೃಷ್ಟಿಯಿಂದ ನನ್ನ ಜೀವನ ನನ್ನ ಸ್ವಚ್ಛ ನಗರ ಎಂಬ ವಿಶೇಷ ಅಭಿಯಾನ ಆರಂಭಿಸಲಾಗಿದೆ. ಇದಕ್ಕೆ ನಗರದ ಸಾರ್ವಜನಿಕರ ಸಹಕಾರ ಅಗತ್ಯ. ನಿಗದಿತ ಕೇಂದ್ರದಲ್ಲಿ ವಸ್ತುಗಳನ್ನು ನೀಡಿ ಯೋಜನೆ ಸಾಕಾರಗೊಳಿಸಬೇಕಿದೆ’ ಎಂದು ಹಿರಿಯ ಆರೋಗ್ಯ ನಿರೀಕ್ಷಕರಾದ ಶಿವಪ್ರಸಾದ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಮಹಾಪೌರರಾದ ಶಿವಕುಮಾರ್, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿಟಿ ಪ್ರಕಾಶ್, ಅಖಿಲ ಭಾರತೀಯ ಗ್ರಾಹಕ ಪಂಚಾಯತ್ನ ಮೈಸೂರು ಘಟಕ ಅಧ್ಯಕ್ಷರಾದ ಡಾ ಜಿ ವಿ ರವಿಶಂಕರ್, ಕೆಎಂಪಿ ಕೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ವಿಕ್ರಮ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಬೈರತಿ ಲಿಂಗರಾಜು, ಸುರೇಶ್, ಜಿ ಎಮ್ ಪಂಚಾಕ್ಷರಿ, ಹಾಗೂ ಇನ್ನಿತರರು ಭಾಗವಹಿಸಿದ್ದರು