ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಸಹಾಯಹಸ್ತ ಚಾಚಿದ ಸುಜೀವ್ ಸಂಸ್ಥೆ
1 min readಮೈಸೂರು: ಕೊವಿಡ್ ಮಹಾಮಾರಿ ಹಿನ್ನಲೆ ಮೈಸೂರಿನಲ್ಲಿ ನೆರವಿನ ಹಸ್ತ ಮುಂದುವರೆದಿದೆ. ಮೈಸೂರಿನ ಸುಜೀವ್ ಸಂಸ್ಥೆ ನಗರ ಕಾಂಗ್ರೆಸ್ ವತಿಯಿಂದ ಮೆಡಿಕಲ್ ಕಿಟ್ ವಿತರಣೆ ಮಾಡಲಾಗಿದೆ.
ಈಗಾಗಲೇ ಹಳ್ಳಿಯಲ್ಲಿ ಔಷಧಿ ಕೊರತೆ ಹಿನ್ನಲೆ. ಔಷಧಿ ಕೊರತೆ ನೀಗಿಸಲು ಮುಂದಾದ ಸುಜೀವ್ ಸಂಸ್ಥೆ ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಸಹಾಯಹಸ್ತ ಚಾಚಿದೆ. ವಿವಿಧ ರೀತಿಯ ವೈದ್ಯಕೀಯ ಚಿಕಿತ್ಸಾ ವಸ್ತುಗಳ ಕಿಟ್ ನೀಡಲಾಗಿದೆ.
ಮೈಸೂರಿನ ಡಿಹೆಚ್ಓ ಡಾ.ಅಮರ್ನಾಥ್ಗೆ ಕಿಟ್ ಹಸ್ತಾಂತರ ಮಾಡಲಾಗಿದೆ. ಮಾಜಿ ಶಾಸಕ MK ಸೋಮಶೇಖರ್, ಸುಜೀವ್ ಸಂಸ್ಥೆ ಮುಖ್ಯಸ್ಥ ರಾಜಾರಾಂ ನೇತೃತ್ವದಲ್ಲಿ ಕಿಟ್ ನೀಡಲಾಗಿದ್ದು, ಅವಶ್ಯಕತೆ ಇದ್ದರೆ ಮತ್ತಷ್ಟು ಕಿಟ್ ವಿತರಿಸುವ ಭರವಸೆ ನೀಡಿದ್ದಾರೆ.