ತಮ್ಮ ಮಗುವಿಗೆ ವಿಷ ಉಣಿಸಿ ತಾವು ಆತ್ಮಹತ್ಯೆ ಮಾಡಿಕೊಂಡ ಅಪ್ಪ-ಅಮ್ಮ!
1 min readಒಂದು ವರ್ಷದ ತನ್ನ ಮಗುವಿಗೆ ವಿಷ ಉಣಿಸಿ ಅಪ್ಪ-ಅಮ್ಮನು ಕೂಡ ಆತ್ಮಹತ್ಯೆಗೆ ಶರಣಾದ ಧಾರುಣ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದಿದೆ. ನಾಗಮಂಗಲದ ಗಂಗಾವಾಡಿ ಗ್ರಾಮದಲ್ಲಿ ಈ ಮನಕಲಕುವ ಘಟನೆ ನಡೆದಿದ್ದು, 28 ವರ್ಷದ ರಘು, 24 ವರ್ಷದ ತನುಶ್ರೀ ತನ್ನ ಮಗು ಕೊಂದು ಆತ್ಮಹತ್ಯೆಗೆ ಶರಣಾದ ದಂಪತಿಗಳಾಗಿದ್ದಾರೆ.
ಒಂದು ವರ್ಷದ ಹೆಣ್ಣು ಮಗುವಿಗೆ ವಿಷ ಉಣಿಸಿ ಬಳಿಕ ತಾವು ಕೂಡ ನೇಣಿಗೆ ಶರಣಾಗಿದ್ದಾರೆ. ಮಂಡ್ಯ ನಗರದ ರಘು, ಗಂಗಾವಾಡಿಯ ತನುಶ್ರೀ ಇಬ್ಬರು ಕೂಡ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಕಳೆದ 8 ದಿನದ ಹಿಂದೆ ತನುಶ್ರೀ ಗಂಡ ಹಾಗೂ ಮಗುವಿನ ಜೊತೆ ತಂದೆ ಮನೆಗೆ ಬಂದಿದ್ರು.
ಆದರೆ ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿಟ್ಟಿರುವ ಮೃತ ತನುಶ್ರೀ, ನಮ್ಮ ಸಾವಿಗೆ ಯಾರೂ ಕಾರಣವಲ್ಲ. ನಾವೇ ಕಾರಣ ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಯವಿಟ್ಟು ನಮ್ಮನ್ನು ಕ್ಷಮಿಸಿ. ನನ್ನ ಗಂಡನ ಮೊಬೈಲ್ ನಲ್ಲಿ ಇರುವ ನಂಬರ್ ಗಳಿಗೆ ಫೋನ್ ಮಾಡಿ ಹೇಳಿ. ನನಗೆ ನನ್ನ ಮಗಳಿಗೆ ನಾನು ತಂದಿರೊ ಹೊಸ ಬಟ್ಟೆಯನ್ನೇ ಹಾಕಿ.
ನನ್ನ ಕೊನೆಯಾಸೆ ಅಂತೆ ಮೂರು ಜನರನ್ನು ಒಟ್ಟಿಗೆ ಮಣ್ಣು ಮಾಡಿ. ನಮ್ಮನ್ನು ಖುಷಿಯಿಂದ ಕಳುಹಿಸಿಕೊಡಿ. ಯಾರೂ ಜಗಳವಾಡಬೇಡಿ ಎಂದು ಬರೆದಿಟ್ಟು ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.