ಮೈಸೂರಲ್ಲಿ ಇಂದು ಲಾಕ್‌ಡೌನ್ ವಿನಾಯತಿ: ಖಾಕಿ ಸರ್ಪಗಾವಲು
1 min readಮೈಸೂರು: ಮೈಸೂರಲ್ಲಿ ಇಂದು ಲಾಕ್‌ಡೌನ್ ವಿನಾಯತಿ ನೀಡಲಾಗಿದ್ದು ಖಾಕಿ ಸರ್ಪಗಾವಲು ಹಾಕಲಾಗಿದೆ.
ಮೈಸೂರಿನ ಪ್ರಮುಖ ಮಾರುಕಟ್ಟೆಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಿ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಅನಗತ್ಯ ಓಡಾಟಕ್ಕೆ ಕಟ್ಟುನಿಟ್ಟಿನ ಬ್ರೇಕ್ ಬಿದ್ದಿದೆ.
ಖುದ್ದು ಹಿರಿಯ ಅಧಿಕಾರಿಗಳು ರಸ್ತೆಗಿಳಿದು ಬೆಳಗ್ಗೆಯಿಂದ ಸಿಟಿ ರೌಂಡ್ಸ್ ಹಾಕುತ್ತಿದ್ದಾರೆ. ನಗರ ಪೊಲೀಸ್ ಆಯುಕ್ತ ಡಾ ಚಂದ್ರಗುಪ್ತ, ಡಿಸಿಪಿಗಳಾದ ಡಾ ಎ ಎನ್ ಪ್ರಕಾಶ್ ಗೌಡ, ಗೀತಾ ಪ್ರಸನ್ನರಿಂದ ಪರಿಶೀಲನೆ ನಡೆಯುತ್ತಿದೆ.
ಪೊಲೀಸರು ಪ್ರಮುಖ ರಸ್ತೆಗಳನ್ನು ಒನ್ ವೇ ಮಾಡಿದ್ದಾರೆ. ಇನ್ನು ಪ್ರಮುಖ ಮಾರುಕಟ್ಟೆಗಳಿಗೆ ವಾಹನ ಎಂಟ್ರಿಗೆ ಬ್ರೇಕ್ ಹಾಕಿ ಒತ್ತಡ ತಪ್ಪಿಸಲು ವಿನೂತನ ಪ್ರಯತ್ನ ಮಾಡಿದ್ದಾರೆ. ಒಂದೆಡೆ ಪಾರ್ಕಿಂಗ್ ಮತ್ತೊಂದೆಡೆ ಶಾಪಿಂಗ್‌ಗೆ ಅವಕಾಶ ನೀಡಲಾಗಿದೆ.