September 9, 2024

ಮೈಸೂರು ಜಿಲ್ಲಾಡಳಿತಕ್ಕೆ ಆಮ್ಲಜನಕ ಸಾಂದ್ರಕ, ಪಿಪಿಇ ಕಿಟ್ ಹಸ್ತಾಂತರಿದ ಶ್ರೀನಿವಾಸನ್ ಸೇವಾ ಟ್ರಸ್ಟ್

1 min read

ಮೈಸೂರು: ಬುಧವಾರ ಟಿ ವಿ ಎಸ್ ಕಂಪನಿಯ ಶ್ರೀನಿವಾಸನ್ ಸೇವಾ ಟ್ರಸ್ಟ್ ವತಿಯಿಂದ ಮೈಸೂರು ಜಿಲ್ಲಾಡಳಿತಕ್ಕೆ 1000 ಪಿಪಿಇ ಕಿಟ್ ಗಳು 5 ಆಮ್ಲಜನಕ ಸಾಂದ್ರಕಗಳು(14-5-21 ರಂದು 135 ಸಾಂದ್ರಕಗಳನ್ನು ನೀಡಲಾಗಿತ್ತು) ಹಾಗೂ ರಬ್ಬರ್ /ಸರ್ಜಿಕಲ್ ಗ್ಲೌಸ್ಗಳು ಹಾಗೂ ಮಾಸ್ಕ್ ಗಳನ್ನು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಹಸ್ತಾಂತರಿಸಲಾಯಿತು.

ಸಂಸ್ಥೆಯು ಈಗಾಗಲೇ ಇಂಥ ಅವಶ್ಯವಿರುವ ವಸ್ತುಗಳನ್ನು ತಾನು ಸೇವೆ ಸಲ್ಲಿಸುತ್ತಿರುವ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ , ದೊಡ್ಡಕಾನ್ಯ,ಮಂಡಕಳ್ಳಿ,ವರಕೋಡು,ಮಹದೇವನಗರ,ಮುದ್ದಹಳ್ಳಿ,ತಗಡೂರು ಹಾಗೂ ಹೆಚ್ ಡಿ ಕೋಟೆ ತಾಲ್ಲೂಕಿನಲ್ಲರುವ ಎರಡು ಒಟ್ಟು 8 ಕೋವಿಡ್ ಕೇಂದ್ರಗಳಿಗೆ ನೇರವಾಗಿ ತಲುಪಿಸಲಾಗಿದೆ.ಮುಂದಿನ ದಿನಗಳಲ್ಲಿಯೂ ತನ್ನ ಸೇವೆಯನ್ನು ಮುಂದುವರೆಸಲಿದೆ.

ಈ ಸಂದರ್ಭದಲ್ಲಿ ಟಿ.ವಿ.ಎಸ್. ಕಂಪನಿಯ ಲಯೇಸನ್ ಅಧಿಕಾರಿ ಪಿ.ಸಿ.ಜಯಣ್ಣ, ಶ್ರೀನಿವಾಸನ್ ಸೇವಾ ಟ್ರಸ್ಟ್ ಕ್ಷೇತ್ರ ನಿರ್ದೇಶಕ ಪುಟ್ಟಮಾದಯ್ಯ ಅವರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *